alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಶಾರೂಕ್ ಪುತ್ರ ಮಾಡಿರೋ ಈ ಕೆಲಸ

ಬಾಲಿವುಡ್ ನ ಸ್ಟಾರ್ ನಟ ಶಾರೂಕ್ ಖಾನ್, ತಮ್ಮ ನಟನಾ ಕೌಶಲ್ಯ ಹಾಗೂ ಸಹಾಯ ಮಾಡುವ ಸ್ವಭಾವದಿಂದಲೇ ಅಭಿಮಾನಿಗಳ ಪ್ರೀತಿಗೆ ಪಾತ್ರರಾದವರು. ಶಾರೂಕ್ ತಮ್ಮ ಮಕ್ಕಳನ್ನು ಇದೇ ದಾರಿಯಲ್ಲಿ ಬೆಳೆಸಿದ್ದಾರೆ ಎನ್ನೋದಕ್ಕೆ ಉತ್ತಮ ಉದಾಹರಣೆ ಸಿಕ್ಕಿದೆ.

ಹೌದು….ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್, ತಮ್ಮ ಸ್ನೇಹಿತರೊಂದಿಗೆ ಮುಂಬೈನಲ್ಲಿ ಪಾರ್ಟಿ ಮಾಡ್ತಾ ಇದ್ದರು. ಪಾರ್ಟಿ ಮುಗಿದು ಹೊರಗೆ ಬರುತ್ತಿದ್ದಂತೆ ಮಾಧ್ಯಮದವರು ಆರ್ಯನ್ ರನ್ನು ಮುತ್ತಿಕೊಂಡರು. ಆರ್ಯನ್ ಇದನ್ನೆಲ್ಲಾ ಲೆಕ್ಕಿಸದೆ, ನೇರವಾಗಿ ತಮ್ಮ ಕಾರ್ ಬಳಿ ಬಂದ್ರು. ಆಗ ಒಬ್ಬ ಮಹಿಳೆ, ಮಗುವಿನೊಂದಿಗೆ ಬಂದು ಭಿಕ್ಷೆ ಬೇಡಿದಳು. ಮಗುವನ್ನು ಕಂಡು ಮಂಜಿನಂತೆ ಕರಗಿದೆ ಆರ್ಯನ್ ಮನಸ್ಸು. ತನ್ನ ಜೇಬಿನಲ್ಲಿದ್ದ ಹಣವನ್ನು ನೀಡಿ ಕಾರು ಹತ್ತಿದ್ದಾರೆ.

ಶಾರೂಕ್ ಮಗ ಈ ರೀತಿ ಬಡವರಿಗೆ ಸಾಹಾಯ ಮಾಡುವ ವಿಡಿಯೋವನ್ನು ಅಲ್ಲೇ ಇದ್ದ ಅಭಿಮಾನಿ ಚಿತ್ರೀಕರಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ರು. ಇದನ್ನು ಕಂಡು ಶಾರೂಕ್ ಅಭಿಮಾನಿಗಳು, ಹಳೆಯ ವಿಡಿಯೋವನ್ನು ಜೋಡಿಸಿ ಹಾಕಿದ್ದಾರೆ. ಅಲ್ಲದೆ ತಂದೆಯ ನೆರಳಲ್ಲಿ ಮಗನ ಹೆಜ್ಜೆ ಎಂಬ ಅಡಿ ಬರಹ ಬರೆದಿದ್ದು, ಸಖತ್ ವೈರಲ್ ಆಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...