alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಸಿಂಗರ್ ಸೋನು ನಿಗಮ್ ಹತ್ಯೆಗೆ ಸಂಚು

ಹಾಡುಗಾರ ಸೋನು ನಿಗಮ್ ಮೇಲೆ ಹಲ್ಲೆ ನಡೆಯುವ ಸಾಧ್ಯತೆಯಿದೆ. ಪ್ರಾಣ ಬೆದರಿಕೆ ಹಿನ್ನೆಲೆಯಲ್ಲಿ ಸೋನು ನಿಗಮ್ ಗೆ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಮಹಾರಾಷ್ಟ್ರದ ಗುಪ್ತಚರ ಇಲಾಖೆ ಪೊಲೀಸ್ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದೆ. ಕೆಲ ಮೂಲಭೂತವಾದಿ ಸಂಘಟನೆಗಳು ಸೋನು ಹತ್ಯೆಗೆ ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಮೂಲಭೂತವಾದಿ ಸಂಘಟನೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಥವಾ ಪ್ರಚಾರ ಕಾರ್ಯಕ್ರಮದಲ್ಲಿ ಸೋನು ಹತ್ಯೆ ನಡೆಸುವ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿತ್ತು. ಗುಪ್ತಚರ ಇಲಾಖೆ ಮಾಹಿತಿ ನಂತ್ರ ಎಚ್ಚೆತ್ತಿರುವ ಪೊಲೀಸರು ಸೋನು ನಿಗಮ್ ಗೆ ಹೆಚ್ಚಿನ ಭದ್ರತೆ ಒದಗಿಸಲು ಮುಂದಾಗಿದ್ದಾರೆ.

ಬೆಳ್ಳಂಬೆಳಿಗ್ಗೆ ಕೇಳಿ ಬರುವ ಮುಸ್ಲಿಂಮರ ಅಜಾನ್ ಪ್ರಾರ್ಥನೆ ವಿರುದ್ಧ ಸೋನು ನಿಗಮ್ ಟ್ವೀಟರ್ ನಲ್ಲಿ ಕಿಡಿಕಾರಿದ್ದರು. ಹಿಂದಿನ ವರ್ಷ ಇದು ಚರ್ಚೆಯ ವಿಷ್ಯವಾಗಿತ್ತು. ನಂತ್ರ ರಾಷ್ಟ್ರಗೀತೆ ಬಗ್ಗೆ ಸೋನು ಹೇಳಿದ ಹೇಳಿಕೆ ಕೂಡ ಕೆಲವರನ್ನು ಕೆರಳಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...