alex Certify
ಕನ್ನಡ ದುನಿಯಾ       Mobile App
       

Kannada Duniya

ಸೇನಾ ಸಮವಸ್ತ್ರ ಹರಾಜಿಗೆ ಮುಂದಾದ ಅಕ್ಷಯ್ ಗೆ ಸಂಕಷ್ಟ

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್, ಸಾಮಾಜಿಕ ಕಾರ್ಯವೊಂದನ್ನು ಕೈಗೊಳ್ಳುವ ಸಲುವಾಗಿ ‘ರುಸ್ತುಂ’ ಚಿತ್ರದಲ್ಲಿ ತಾವು ಧರಿಸಿದ್ದ ಸೇನಾ ಸಮವಸ್ತ್ರವನ್ನು ಹರಾಜು ಮಾಡಲು ಮುಂದಾಗಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆಯಲ್ಲದೇ ಅಕ್ಷಯ್ ಕುಮಾರ್ ಗೆ ಹರಾಜು ಹಿಂಪಡೆಯುವಂತೆ ಸೂಚಿಸಿ ಲೀಗಲ್ ನೋಟೀಸ್ ನೀಡಲಾಗಿದೆ.

‘ರುಸ್ತುಂ’ ಚಿತ್ರದಲ್ಲಿ ಅಕ್ಷಯ್ ಕುಮಾರ್ ನೌಕಾದಳದ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬಾಕ್ಸಾಫೀಸ್ ನಲ್ಲಿ ಚಿತ್ರ ಭಾರೀ ಗಳಿಕೆ ಮಾಡಿತಾದರೂ ಚಿತ್ರದ ಕುರಿತು ಸೇನಾಧಿಕಾರಿಗಳಿಂದಲೇ ಅಪಸ್ವರ ಕೇಳಿ ಬಂದಿತ್ತು.

ಚಿತ್ರದಲ್ಲಿ ಅವರು ಧರಿಸಿದ್ದ ಸಮವಸ್ತ್ರದ ಕುರಿತು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೇ ಸೇನಾ ನಿಯಮಾವಳಿಗಳಂತೆ ಈ ಸಮವಸ್ತ್ರವಿಲ್ಲವೆಂದು ಟೀಕಿಸಿದ್ದರು. ಈ ವಿಚಾರ ತಣ್ಣಗಾದ ಬಳಿಕ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ, ಸಾಮಾಜಿಕ ಕಾರ್ಯವೊಂದನ್ನು ಕೈಗೊಳ್ಳಲು ಅಕ್ಷಯ್ ಧರಿಸಿದ್ದ ಸಮವಸ್ತ್ರವನ್ನು ಹರಾಜು ಮಾಡಲಾಗುವುದು ಎಂದು ಪ್ರಕಟಿಸಿದ್ದು, ಪತ್ನಿಯ ಕಾರ್ಯಕ್ಕೆ ಅಕ್ಷಯ್ ಕುಮಾರ್ ಕೂಡಾ ಸಾಥ್ ನೀಡಿದ್ದರು.

ಈ ಹರಾಜಿಗೆ ವಿರೋಧ ವ್ಯಕ್ತವಾಗಿದ್ದು, ಅಕ್ಷಯ್ ಕುಮಾರ್ ಗೆ ಈಗ ಲೀಗಲ್ ನೋಟೀಸ್ ನೀಡಲಾಗಿದೆ. ಅಷ್ಟೇ ಅಲ್ಲ, ಪಠಾಣ್ ಕೋಟ್ ಸೇನಾ ನೆಲೆ ಮೇಲೆ ಉಗ್ರರು ಸೇನಾ ಸಮವಸ್ತ್ರ ಧರಿಸಿ ದಾಳಿ ನಡೆಸಿದ ಬಳಿಕ ದೇಶಾದ್ಯಂತ ಸೇನಾ ಸಮವಸ್ತ್ರ ಧರಿಸುವುದು ಹಾಗೂ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ ಎಂಬ ಸಂಗತಿಯನ್ನೂ ಇದರಲ್ಲಿ ಪ್ರಸ್ತಾಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...