alex Certify
ಕನ್ನಡ ದುನಿಯಾ       Mobile App
       

Kannada Duniya

‘ಲಂಬೋದರ’ನಾದ ಲೂಸ್ ಮಾದ: ಭಾರೀ ಸದ್ದು ಮಾಡಿದೆ ಚಿತ್ರದ ಟ್ರೈಲರ್

ಕೃಷ್ಣರಾಜ್ ನಿರ್ದೇಶನದ ಲೂಸ್ ಮಾದ ಯೋಗಿ ಅಭಿನಯದ ಬಹು ನಿರೀಕ್ಷಿತ ಕಾಮಿಡಿ ಚಿತ್ರ ‘ಲಂಬೋದರ’ ಟ್ರೈಲರ್ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ.

ಬಹಳ ಗ್ಯಾಪ್ ನ ನಂತರ ಯೋಗಿ ‘ಲಂಬೋದರ’ ಸಿನಿಮಾ ಒಪ್ಪಿಕೊಂಡಿದ್ದು. ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಯೋಗಿಗೆ ಆಕಾಂಕ್ಷಾ ನಾಯಕಿಯಾಗಿದ್ದಾರೆ. ‘ಲಂಬೋದರ’ ಶೀರ್ಷಿಕೆಗೆ ಬಸವನಗುಡಿ ಬೆಂಗಳೂರು ಎಂಬ ಅಡಿ ಬರಹವಿದ್ದು, ಬಸವನಗುಡಿ ಸುತ್ತಮುತ್ತಲಿನ ಕಥೆಯನ್ನು ಚಿತ್ರ ಹೊಂದಿದೆ ಎನ್ನಲಾಗಿದೆ.

ವೃಷಾಂಕ್‌ ಮೂವೀ ಮೇಕರ್ಸ್‌ ಬ್ಯಾನರ್‌ನಲ್ಲಿ ಮೂಡಿ ಬಂದಿರುವ ಚಿತ್ರದಲ್ಲಿ ಕಾರ್ತಿಕ್‌ ಶರ್ಮ ಸಂಗೀತ, ಅರವಿಂದ್‌ ಎಸ್‌. ಕಶ್ಯಪ್‌ ಛಾಯಾಗ್ರಹಣ, ಹರೀಶ್‌ ಗಿರಿಗೌಡ ಸಂಕಲನವಿದೆ. ಯೋಗರಾಜ್‌ ಭಟ್‌ ಹಾಗೂ ಜಯಂತ ಕಾಯ್ಕಿಣಿ ಗೀತ ರಚನೆಯಿರುವ ಈ ಚಿತ್ರದ ಸಂಭಾಷಣೆಯನ್ನು ಕೆ. ಕೃಷ್ಣರಾಜ್‌ ಹಾಗೂ ಶೈಲೇಶ್‌ ರಾಜ್‌ ಬರೆದಿದ್ದಾರೆ. ಸಾಹಸ ನಿರ್ದೇಶನ ವಿಕ್ರಂರದ್ದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿರುವ ಚಿತ್ರದ ಟ್ರೈಲರ್ ಕುತೂಹಲಭರಿತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...