alex Certify
ಕನ್ನಡ ದುನಿಯಾ       Mobile App
       

Kannada Duniya

‘ಲಗಾನ್’ ಖ್ಯಾತಿಯ ನಟ ಇನ್ನಿಲ್ಲ

ಅಮೀರ್ ಖಾನ್ ಅಭಿನಯದ ಜನಪ್ರಿಯ ಚಿತ್ರ ‘ಲಗಾನ್’ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಶ್ರೀವಲ್ಲಭ ವ್ಯಾಸ್ ಜೈಪುರದಲ್ಲಿ ಭಾನುವಾರ ನಿಧನರಾಗಿದ್ದಾರೆ.

60 ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದು, ಟಿ.ವಿ. ಶೋ, ರಂಗಭೂಮಿಯಲ್ಲಿ ಸಾಂದರ್ಭಿಕ ಪ್ರದರ್ಶನಗಳನ್ನು ಅವರು ನೀಡಿದ್ದಾರೆ.

ಪ್ರಾದೇಶಿಕ ಸಿನಿಮಾಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ‘ಸರ್ಫರೋಶ್’, ‘ಅಭಯ್’, ‘ಶೂಲ್’, ‘ದಿ ಫರ್ಗಾಟನ್’ ‘ ಮೊದಲಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. 1985 ರಲ್ಲಿ ಬಿಡುಗಡೆಯಾಗಿದ್ದ ‘ವಿರಾಸತ್’ನಲ್ಲಿ ಅವರು ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

2008 ರಲ್ಲಿ ಗುಜರಾತ್ ಹೋಟೆಲ್ ನಲ್ಲಿ ಕುಸಿದು ಬಿದ್ದ ನಂತರ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು.

ಪತ್ನಿ ಶೋಭಾ ವ್ಯಾಸ್ ಹಾಗೂ ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಅವರ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...