alex Certify
ಕನ್ನಡ ದುನಿಯಾ       Mobile App
       

Kannada Duniya

20 ರ ಹರೆಯದಲ್ಲೇ ತಾಯಿಯಾದ ನಟಿ 9 ತಿಂಗಳು ಮುಚ್ಚಿಟ್ಟಿದ್ಲು ಸತ್ಯ…!

ರಿಯಾಲಿಟಿ ಟಿವಿ ಸ್ಟಾರ್ ಕೈಲಿ ಜೆನ್ನರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. 20ನೇ ವಯಸ್ಸಿನಲ್ಲಿಯೇ ಕೈಲಿ ಅಮ್ಮನಾಗಿದ್ದು, 9 ತಿಂಗಳವರೆಗೂ ಗರ್ಭಿಣಿ ಎಂಬ ವಿಷ್ಯವನ್ನು ಕೈಲಿ ಮುಚ್ಚಿಟ್ಟಿದ್ದಳು.

ಗೆಳೆಯ ಟ್ರಾವಿಸ್ ಸ್ಕಾಟ್ ಮಗುವಿಗೆ ಕೈಲಿ ಅಮ್ಮನಾಗಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ಮಗುವಾಗಿರುವ ಸುದ್ದಿಯನ್ನು ಹೇಳಿದ ಕೈಲಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾಳೆ. ನನ್ನ ಪ್ರತಿಯೊಂದು ಖಾಸಗಿ ವಿಷ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೆ. ಆದ್ರೆ ಗರ್ಭಿಣಿ ಎಂಬ ವಿಷ್ಯವನ್ನು ಎಲ್ಲರ ಮುಂದೆ ಹೇಳುವುದು ನನಗೆ ಇಷ್ಟವಿರಲಿಲ್ಲ. ನಿಮ್ಮ ಕ್ಷಮೆ ಯಾಚಿಸುತ್ತೇನೆಂದು ಕೈಲಿ ಇನ್ಸ್ಟ್ರಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾಳೆ.

ಫೆಬ್ರವರಿ 1ರಂದು ಸುಂದರ ಹಾಗೂ ಆರೋಗ್ಯವಂತ ಮಗು ಜನಿಸಿದೆ. ಇದನ್ನು ಮುಚ್ಚಿಡಲು ನನ್ನಿಂದ ಸಾಧ್ಯವಾಗಲಿಲ್ಲ. ಗರ್ಭಿಣಿ ಎಂಬ ವಿಷ್ಯವನ್ನು ಮುಚ್ಚಿಟ್ಟ ನನ್ನ ಕುಟುಂಬಸ್ಥರು ಹಾಗೂ ಸ್ನೇಹಿತರಿಗೂ ಧನ್ಯವಾದಗಳು ಎಂದಿರುವ ಕೈಲಿ ತಾಯಿಯಾಗೋದು ಒಂದು ಸುಂದರ ಅನುಭವ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...