alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಪ್ಟನ್ ಆಗಿ ಇಮ್ಯೂನಿಟಿ ಪಡೆದ ಶೈನ್ ಶೆಟ್ಟಿ: ಉಳಿದವರೆಲ್ಲ ನಾಮಿನೇಟ್

‘ಬಿಗ್ ಬಾಸ್’ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದವರನ್ನು ಹೊರತುಪಡಿಸಿ ಉಳಿದವರೆಲ್ಲ ನಾಮಿನೇಟ್ ಆಗಲಿದ್ದಾರೆ ಎಂದು ‘ಬಿಗ್ ಬಾಸ್’ ತಿಳಿಸಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಶೈನ್ ಶೆಟ್ಟಿ, ವಾಸುಕಿ ವೈಭವ್ ಮತ್ತು ಕುರಿ ಪ್ರತಾಪ್ ಭಾಗವಹಿಸಿದ್ದರು. ಅವರಲ್ಲಿ ಶೈನ್ ಶೆಟ್ಟಿ ಮತ್ತು ವಾಸುಕಿ ನಡುವೆ ತೀವ್ರ ಪೈಪೋಟಿ ನಡೆದಿದ್ದು ಶೈನ್ ಶೆಟ್ಟಿ ಬೇಗನೆ ಟಾಸ್ಕ್ ಪೂರ್ಣಗೊಳಿಸಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಅವರು ಎರಡು ತಂಡಗಳನ್ನು ರಚಿಸಿದ್ದಾರೆ. ಹರೀಶ್ ರಾಜ್ ನೇತೃತ್ವದಲ್ಲಿ ಒಂದು ತಂಡ, ವಾಸುಕಿ ವೈಭವ್ ನೇತೃತ್ವದಲ್ಲಿ ಮತ್ತೊಂದು ತಂಡ ರಚನೆಯಾಗಿದೆ. ಯುದ್ಧಕಾಂಡ ಲಗ್ಸುರಿ ಬಜೆಟ್ ಟಾಸ್ಕ್ ನ ಮೊದಲ ಚಟುವಟಿಕೆಯಲ್ಲಿ ಹರೀಶ್ ರಾಜ್ ನೇತೃತ್ವದ ಗರುಡ ತಂಡ ಜಯಗಳಿಸಿದೆ. ವಾಸುಕಿ ನೇತೃತ್ವದ ಡಮರುಗ ತಂಡ ಹಿನ್ನಡೆ ಕಂಡಿದೆ.

‘ಬಿಗ್ ಬಾಸ್’ ಮನೆಗೆ ಕುರಿಪ್ರತಾಪ್ ಅವರ ಪತ್ನಿ ಮತ್ತು ಮಕ್ಕಳು ಆಗಮಿಸಿದ್ದಾರೆ. ಪತ್ನಿಯನ್ನು ನೋಡಿದ ಕುರಿ ಪ್ರತಾಪ್ ತುಂಬಾ ದಪ್ಪ ಆಗಿದ್ದೀಯಾ ಎಂದು ಹೇಳಿದರೆ ಅವರ ಪತ್ನಿ ನೀವು ತುಂಬಾ ಸಣ್ಣ ಆಗಿದ್ದೀರಾ ಎಂದು ಹೇಳಿದ್ದಾರೆ. ಇನ್ನು ಮೂರೇ ವಾರ ಇರುವುದು ಚೆನ್ನಾಗಿ ಆಟವಾಡಿ ಎಂದು ಕುರಿ ಪ್ರತಾಪ್ ಗೆ ಪತ್ನಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...