alex Certify
ಕನ್ನಡ ದುನಿಯಾ       Mobile App
       

Kannada Duniya

1000 ಎಪಿಸೋಡ್ ಪೂರೈಸಿದೆ ಈ ಜನಪ್ರಿಯ ಧಾರಾವಾಹಿ

ಕಿರುತೆರೆಯಲ್ಲಿ ಜನಪ್ರಿಯವಾಗಿರುವ ಅಪಾರ ವೀಕ್ಷಕರನ್ನು ಸೆಳೆದಿರುವ ‘ಕುಂಕುಮ್ ಭಾಗ್ಯ’ ಧಾರಾವಾಹಿ 1000 ಎಪಿಸೋಡ್ ಗಳನ್ನು ಪೂರೈಸಿದೆ. ‘ಕುಂಕುಮ್ ಭಾಗ್ಯ’  ಆರಂಭದಿಂದಲೂ ಕತೆ, ನಿರೂಪಣೆ ಶೈಲಿಯಿಂದಾಗಿ ವೀಕ್ಷಕರನ್ನು ಸೆಳೆದಿದೆ.

ಏಕ್ತಾ ಕಪೂರ್ ಅವರ ಈ ಧಾರಾವಾಹಿ ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುತ್ತಿದ್ದು, ಟಿ.ಆರ್.ಪಿ.ಯಲ್ಲಿ ಮುಂದಿದೆ. 1000 ಎಪಿಸೋಡ್ ಗಳನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಧಾರಾವಾಹಿ ತಂಡದಿಂದ ಡಿಸೆಂಬರ್ 21 ರಂದು ಸಂಭ್ರಮಾಚರಣೆ ಸಮಾರಂಭ ಏರ್ಪಡಿಸಲಾಗಿದೆ.

‘ಕುಂಕುಮ್ ಭಾಗ್ಯ’ ಧಾರಾವಾಹಿ ತಂಡದವರೆಲ್ಲಾ ಸೇರಿ ಸಂಭ್ರಮಿಸಿದ್ದು, ಅವರಿಗೆ ಸಿನಿಮಾ ರಂಗದವರು ಶುಭ ಹಾರೈಸಿದ್ದಾರೆ. ಶಬ್ಬೀರ್ ಅಹ್ಲುವಾಲಿಯಾ, ಶ್ರೀತಿ ಝಾ, ಲೀನಾ ಜುಮಾನಿ ಮೊದಲಾದವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

2014 ರ ಏಪ್ರಿಲ್ 15 ರಂದು ಪ್ರಸಾರ ಆರಂಭಿಸಿದ ‘ಕುಂಕುಮ್ ಭಾಗ್ಯ’ ಟಿ.ಆರ್.ಪಿ.ಯಲ್ಲಿ ಅಗ್ರಸ್ಥಾನದಲ್ಲಿದೆ. ಏಕ್ತಾ ಕಪೂರ್ ಬ್ಯಾನರ್ ನ ಜನಪ್ರಿಯ ಧಾರಾವಾಹಿ ಇದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...