alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಹಾಡಿಗೆ ಕುಚಿಪುಡಿ ಕಲಾವಿದೆಯ ಮಸ್ತ್ ಸ್ಪೆಪ್ಸ್

kuchi-1

ಕುಚಿಪುಡಿ ಡಾನ್ಸರ್ ಹಾಗೂ ಕೊರಿಯೋಗ್ರಾಫರ್ ದೀಪಾ ಅಯ್ಯಂಗಾರ್ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದ್ದಾರೆ. ‘ತೂ ಚೀಸ್ ಬಡೀ ಹೈ’ ಹಾಡಿಗೆ ದೀಪಾ ಮಾಡಿರೋ ಡಾನ್ಸ್ ಸಿಕ್ಕಾಪಟ್ಟೆ ಫೇಮಸ್ ಆಗ್ಬಿಟ್ಟಿದೆ. ಯುಟ್ಯೂಬ್ ನಲ್ಲಿ ಈ ವಿಡಿಯೋವನ್ನು ಒಂದು ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

‘ತೂ ಚೀಸ್ ಬಡೀ ಹೈ’ 90ರ ದಶಕದ ಅತ್ಯಂತ ಜನಪ್ರಿಯ ಹಾಡು. 1994ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಚಿತ್ರ ‘ಮೊಹ್ರಾ’ ಹಾಡು ಇದಾಗಿದ್ದು, ಅಕ್ಷಯ್ ಕುಮಾರ್ ಹಾಗೂ ರವೀನಾ ಟಂಡನ್ ಸೊಂಟ ಬಳುಕಿಸಿದ್ದರು.

ಆ ಹಾಡಿಗೆ ಡಿಫರೆಂಟ್ ಆಗಿ ನೃತ್ಯ ಮಾಡಬಹುದು ಅನ್ನೋದನ್ನು ದೀಪಾ ತೋರಿಸಿಕೊಟ್ಟಿದ್ದಾರೆ. ದೀಪಾಳ ಸಖತ್ ಸ್ಟೆಪ್ಸ್ ಹಾಗೂ ಮೂವ್ಸ್ ಎಲ್ಲರಿಗೂ ಇಷ್ಟವಾಗಿದೆ.

ಮನೆಯ ಟೆರೆಸ್ ಮೇಲೆ ದೀಪಾ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾಳೆ. ಎಪ್ರಿಲ್ 3ರಂದೇ ಈ ವಿಡಿಯೋ ಯುಟ್ಯೂಬ್ ನಲ್ಲಿ ಅಪ್ ಲೋಡ್ ಆಗಿದ್ದು, ಈಗಲೂ ಜನರು ಅದನ್ನು ಮುಗಿಬಿದ್ದು ನೋಡ್ತಿದ್ದಾರೆ.


 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...