alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ನೆಸ್ ಗಾಗಿ ಪೋಲೋ ಡಾನ್ಸ್ ಮೊರೆ ಹೋದ ನಟಿ

ಫಿಟ್ನೆಸ್ ಗಾಗಿ ನಟಿ ಕೃತಿ ಕರಬಂಧ ಪೋಲೋ ಡಾನ್ಸ್ ಮೊರೆ ಹೋಗಿದ್ದಾರೆ. ಕೃತಿ, ಸಾಜಿದ್ ರ ಹೌಸ್ ಫುಲ್-4 ಚಿತ್ರಕ್ಕೆ ಸಹಿ ಹಾಕಿದ್ದಾರೆ. ಯಮಲಾ ಪಗಲಾ ದಿವಾನಾ ಪಿರ್ ಸೇ ಶೀಘ್ರವೇ ತೆರೆಗೆ ಬರ್ತಿದೆ. ಹೌಸ್ ಫುಲ್ -4 ಕಾಮಿಡಿ ಚಿತ್ರಕ್ಕೆ ಕೃತಿ ಫಿಟ್ ಆಗಿರುವುದು ಬಹಳ ಮುಖ್ಯ.

ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡ್ತಿರುವ ನಟಿ ಪೋಲೋ ಡಾನ್ಸ್ ಮೊರೆ ಹೋಗಿದ್ದಾಳೆ. ಫಿಟ್ನೆಸ್ ಡಯೆಟ್ ಕೂಡ ಪಾಲಿಸ್ತಿದ್ದಾರೆ. ಪೋಲೋ ಜೊತೆ ಬಾಲಿವುಡ್ ಹಾಗೂ ಕಂಟೆಂಪರರಿ ಡಾನ್ಸ್ ತರಬೇತಿಯನ್ನೂ ಕೃತಿ ಪಡೆಯುತ್ತಿದ್ದಾರೆ. ಪೋಲೋ ಡಾನ್ಸ್ ಫಿಟ್ನೆಸ್ ಜೊತೆಗೆ ನೃತ್ಯದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈವರೆಗೆ ನಾನು ಈ ಡಾನ್ಸ್ ಮಾಡಿರಲಿಲ್ಲ. ಪೋಲೋ ಡಾನ್ಸ್ ನನಗೆ ಖುಷಿ ನೀಡ್ತಿದೆ ಎಂದು ಕೃತಿ ಹೇಳಿದ್ದಾರೆ.

ಶಾದಿ ಚಿತ್ರದಲ್ಲಿ ರಾಜಕುಮಾರ್ ರಾವ್ ಜೊತೆ ಕಾಣಿಸಿಕೊಂಡಿದ್ದ ಕೃತಿ ತುಂಬಾ ಫಿಟ್ ಆಗಿ ಕಾಣ್ತಿದ್ದರು. ಅಭಿಮಾನಿಗಳು ಚಿತ್ರದಲ್ಲಿ ಕೃತಿಯನ್ನು ಮೆಚ್ಚಿಕೊಂಡಿದ್ದರು. ಕೃತಿ ಕರಬಂಧ ತೆಲುಗು, ಕನ್ನಡ ಸೇರಿದಂತೆ ಹಿಂದಿ ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...