alex Certify
ಕನ್ನಡ ದುನಿಯಾ       Mobile App
       

Kannada Duniya

‘ಕೊಲವರಿ ಡಿ’ ಫ್ಲಾಶ್ ಮಾಬ್ ಮತ್ತೊಮ್ಮೆ ನೋಡಿ ಎಂಜಾಯ್ ಮಾಡಿ

ಸಾಮಾಜಿಕ ಜಾಲತಾಣಗಳು ಬಂದ ಬಳಿಕ ಆನೇಕ ಪ್ರತಿಭೆಗಳು ಅನಾವರಣಗೊಳ್ಳುತ್ತಿವೆ. ಅಷ್ಟೇ ಅಲ್ಲ ತಮ್ಮಲ್ಲಿರುವ ಟ್ಯಾಲೆಂಟ್ ಹೊರ ಹಾಕಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಮೂಲಕ ಹಲವರು ಮನೆ ಮಾತಾಗಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕವೇ ಆರಂಭಗೊಂಡ ಡಬ್ ಸ್ಮಾಶ್, ಫ್ಲಾಶ್ ಮಾಬ್ ಗಳಿಂದ ಆನೇಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈ ಪೈಕಿ 2011 ರಲ್ಲಿ ಬಿಡುಗಡೆಗೊಂಡ ತಮಿಳಿನ ಖ್ಯಾತ ನಟ ಧನುಷ್ ಹಾಡಿದ, ಅನಿರುದ್ದ್ ಸಂಯೋಜನೆಯ ‘ವೈ ದಿಸ್ ಕೊಲವರಿ ಡಿ’ ಹಾಡು ವಿಶ್ವದಾದ್ಯಂತ ಸಂಚಲನವನ್ನೇ ಸೃಷ್ಟಿಸಿದ್ದು, ಇದಕ್ಕೆ ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ನಲ್ಲಿನ ಭಾರತೀಯರು ಫ್ಲಾಶ್ ಮಾಬ್ ಮಾಡಿದ್ದರು. ಇದರಲ್ಲಿ ಕೆಲ ವಿದೇಶಿಯರೂ ಪಾಲ್ಗೊಂಡಿದ್ದು ವಿಶೇಷ.

ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಪದ್ಮಾ ಅಕುಲಾ ಎಂಬವರು 2011 ರ ಡಿಸೆಂಬರ್ 21 ರಂದು  ಅಪ್ ಲೋಡ್ ಮಾಡಿದ್ದ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಇದನ್ನು ಮತ್ತೊಮ್ಮೆ ನೋಡಿ ಎಂಜಾಯ್ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...