alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಯ್ನಾ ಮಿತ್ರಾಳನ್ನು ಕೆರಳಿಸಿದೆ ಸೋನಂ ಕಪೂರ್ ಮಾಡಿರೋ ಈ ಪೋಸ್ಟ್

ಕಥುವಾ ಹಾಗೂ ಉನ್ನಾವ್ ನಲ್ಲಿ ನಡೆದಿರೊ ಅತ್ಯಾಚಾರ ಪ್ರಕರಣಗಳನ್ನು ಬಾಲಿವುಡ್ ಸೆಲೆಬ್ರಿಟಿಗಳು ತೀವ್ರವಾಗಿ ಖಂಡಿಸಿದ್ದಾರೆ. ಕರೀನಾ ಕಪೂರ್, ಜಾವೇದ್ ಅಖ್ತರ್, ಸ್ವರಾ ಭಾಸ್ಕರ್ ಸೇರಿದಂತೆ ಹಲವರು ಈ ಹೇಯ ಕೃತ್ಯಗಳ ಬಗ್ಗೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ದೇವಸ್ಥಾನದಲ್ಲಿ ಇಂತಹ ಕೃತ್ಯ ನಡೆದಿರೋದು ನಿಜಕ್ಕೂ ಅಮಾನವೀಯ ಅಂತಾ ನಟಿ ಸೋನಂ ಕಪೂರ್ ಪೋಸ್ಟ್ ಮಾಡಿದ್ದರು. ಅದಕ್ಕೂ ಮುನ್ನ ಮಾಡಿದ್ದ ಫೋಸ್ಟ್ ನಲ್ಲಿ, ನಕಲಿ ರಾಷ್ಟ್ರೀಯವಾದಿಗಳು ಮತ್ತು ನಕಲಿ ಹಿಂದುಗಳು ಮಾಡಿರೋ ಈ ಕೃತ್ಯ ನಿಜಕ್ಕೂ ನಾಚಿಕೆಗೇಡು ಎಂದಿದ್ದರು.

ಸೋನಂ ಕಪೂರ್ ರ ಈ ಹೇಳಿಕೆ ನಟಿ ಕೊಯ್ನಾ ಮಿತ್ರಾರನ್ನು ಕೆರಳಿಸಿದೆ. ಅಪರಾಧ ಪ್ರಕರಣಕ್ಕೆ ಕೋಮುವಾದದ ಬಣ್ಣ ಬಳಿದ ನಟಿಯನ್ನು ಕೊಯ್ನಾ ಮಿತ್ರಾ ಜಾಲತಾಣದಲ್ಲಿ ಖಂಡಿಸಿದ್ದಾರೆ. ಈ ಅಪರಾಧ ಕೃತ್ಯಕ್ಕಾಗಿ ಇಡೀ ಹಿಂದೂ ಧರ್ಮವನ್ನೇ ನಿಂದಿಸುವುದು ಎಷ್ಟು ಸರಿ ಅಂತಾ ಪ್ರಶ್ನಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...