alex Certify
ಕನ್ನಡ ದುನಿಯಾ       Mobile App
       

Kannada Duniya

ಟೈಗರ್ ಶ್ರಾಫ್ ಹಿರೋಯಿನ್ ಜೊತೆ ಕಾಣಿಸಿಕೊಂಡ ರಾಹುಲ್…!

ಕ್ರಿಕೆಟ್ ಹಾಗೂ ಬಾಲಿವುಡ್ ನಂಟು ಈಗಿನದ್ದಲ್ಲ. ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ಶರ್ಮಿಳಾರಿಂದ ಶುರುವಾದ ನಂಟು ಈಗ್ಲೂ ಮುಂದುವರೆದಿದೆ. ಕೆಲ ತಿಂಗಳ ಹಿಂದಷ್ಟೇ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಎಲಿ ಮಧ್ಯೆ ಕುಚ್ ಕುಚ್ ಶುರುವಾಗಿದೆ ಎನ್ನಲಾಗಿತ್ತು. ಆದ್ರೆ ನಾವಿಬ್ರೂ ಸ್ನೇಹಿತರು ಅಂತಾ ಎಲಿ ಎಲ್ಲರ ಬಾಯಿ ಮುಚ್ಚಿಸಿದ್ದರು. ಈಗ ಕೆ.ಎಲ್. ರಾಹುಲ್ ಸರದಿ.

ಐಪಿಎಲ್ 2018ರಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಪರ ಆಡಿದ ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಮೂಲಕ ಮಿಂಚಿರುವ ರಾಹುಲ್ ಬಾಲಿವುಡ್ ನಟ ಟೈಗರ್ ಶ್ರಾಫ್ ಹೀರೋಯಿನ್ ಜೊತೆ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಹಾಗೂ ನಿಧಿ ಅಗರ್ವಾಲ್ ಫೋಟೋ ವೈರಲ್ ಆಗಿದೆ. ನಿಧಿ ಟೈಗರ್ ಶ್ರಾಫ್ ಜೊತೆ ಮುನ್ನಾ ಮೈಕಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಳು.

ಮೇ29ರಂದು ಮುಂಬೈನ ಬಾಂದ್ರಾ ಬಳಿಯ ರೆಸ್ಟೋರೆಂಟ್ ಒಂದರಲ್ಲಿ ರಾಹುಲ್-ನಿಧಿ ಭೇಟಿಯಾಗಿದ್ದಾರೆ. ಇಬ್ಬರೂ ಡಿನ್ನರ್ ಡೇಟ್ ಗೆ ಬಂದಿದ್ದರು ಎನ್ನಲಾಗಿದೆ. ಆದ್ರೆ ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ರೆಸ್ಟೋರೆಂಟ್ ನಿಂದ ಹೊರ ಬರ್ತಿದ್ದಂತೆ ಕ್ಯಾಮರಾ ನೋಡಿ ಮುಗುಳ್ನಕ್ಕ ನಿಧಿ, ರಾಹುಲ್ ಜೊತೆ ಒಂದೇ ಕಾರಿನಲ್ಲಿ ಹೋಗಿದ್ದಾರೆ. ನಿಧಿ-ರಾಹುಲ್ ಮಧ್ಯೆ ಏನೋ ಸ್ಪೆಷಲ್ ಇದೆ ಎಂಬ ಸುದ್ದಿ ಸದ್ಯ ಹರಿದಾಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...