alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರಾಟವಾಗ್ತಿದೆ ಖ್ಯಾತ ಗಾಯಕ ಕಿಶೋರ್ ಕುಮಾರ್ ಮನೆ

ಬಾಲಿವುಡ್ ನ ಖ್ಯಾತ ಗಾಯಕ ದಿವಂಗತ ಕಿಶೋರ್ ಕುಮಾರ್ ರವರ ಪೂರ್ವಿಕರ ಮನೆಯನ್ನು ಮಾರಾಟ ಮಾಡಲಾಗ್ತಿದೆ. ಮಧ್ಯ ಪ್ರದೇಶದ ಖಾಂಡ್ವಾ ಪಟ್ಟಣದಲ್ಲಿರುವ ಈ ಮನೆಯನ್ನು ಕಿಶೋರ್ ಕುಮಾರ್ ಅವರ ಪುತ್ರ ಅಮಿತ್ ಕುಮಾರ್ ಹಾಗೂ ಇತರೆ ಕುಟುಂಬ ಸದಸ್ಯರು ಬರೋಬ್ಬರಿ 14 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡ್ತಿದ್ದಾರೆ ಎನ್ನಲಾಗಿದೆ.

7,200 ಚದರಡಿ ವಿಸ್ತೀರ್ಣದಲ್ಲಿರುವ ಈ ನಿವಾಸವನ್ನು ಪ್ರತಿ ಚದರಡಿಗೆ 20 ಸಾವಿರ ರೂ. ಗಳಂತೆ ಮುಂಬೈ ಮೂಲದ ಬಿಲ್ಡರ್ ಅಭಯ್ ಜೈನ್ ಎಂಬವರಿಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದ್ದು, ಇದು ಕಿಶೋರ್ ಕುಮಾರ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಕಿಶೋರ್ ಕುಮಾರ್ ಅವರಿಗೆ ದೇವಾಲಯ ನಿರ್ಮಿಸಿರುವ ಅವರ ಕಟ್ಟಾ ಅಭಿಮಾನಿ ಸುನೀಲ್ ಬಹಮಾನಿಯಾ ಸೇರಿದಂತೆ ಹಲವರು, ಮಧ್ಯಪ್ರದೇಶ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಕಿಶೋರ್ ಕುಮಾರ್ ಅವರ ನಿವಾಸವನ್ನು ವಶಕ್ಕೆ ಪಡೆಯಬೇಕು. ಕಿಶೋರ್ ಕುಮಾರ್ ಸ್ಮರಣಾರ್ಥ ಅಲ್ಲಿ ಮ್ಯೂಸಿಯಂ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...