alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದು ರಕ್ಷಿತ್ ಶೆಟ್ಟಿ, ರಶ್ಮಿಕಾ ಎಂಗೇಜ್ಮೆಂಟ್

rash-rax-enga

ಮಡಿಕೇರಿ: ‘ಕಿರಿಕ್ ಪಾರ್ಟಿ’ ಚಿತ್ರದ ಯಶಸ್ವಿ ಜೋಡಿಗಳಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ನಿಜ ಜೀವನದಲ್ಲಿಯೂ ಜೊತೆಯಾಗುತ್ತಿದ್ದು, ಇಂದು ಸಂಜೆ ವಿರಾಜಪೇಟೆಯ ಸೆರಿನಿಟಿ ಹಾಲ್ ನಲ್ಲಿ ನಿಶ್ಚಿತಾರ್ಥ ನಡೆಯಲಿದೆ.

ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು, ಆಗಮಿಸಲಿರುವ ಅತಿಥಿಗಳನ್ನು ಸತ್ಕರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬಂಧು, ಬಾಂಧವರು, ಆತ್ಮೀಯರ ಸಮ್ಮುಖದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನೆರವೇರಲಿದ್ದು, ಚಿತ್ರರಂಗದ ಕಲಾವಿದರು ಕೂಡ ಸಾಕ್ಷಿಯಾಗಲಿದ್ದಾರೆ.

ವಿರಾಜಪೇಟೆಯ ಸೆರಿನಿಟಿ ಹಾಲ್ ಶೃಂಗಾರಗೊಂಡಿದ್ದು, ಸಂಜೆ ನಡೆಯುವ ಅದ್ಧೂರಿ ಸಮಾರಂಭದಲ್ಲಿ ನಿಶ್ಚಿತಾರ್ಥ ನೆರವೇರಲಿದೆ.

‘ಕಿರಿಕ್ ಪಾರ್ಟಿ’ ಬಳಿಕ ಇಬ್ಬರೂ ಬೇರೆ, ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಚಿತ್ರಗಳನ್ನು ಪೂರ್ಣಗೊಳಿಸಿ ವರ್ಷಾಂತ್ಯಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...