alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಗೇಜ್ ಆದ ‘ಕಿರಿಕ್ ಪಾರ್ಟಿ’ಯ ಸಾನ್ವಿ, ಕರ್ಣ

rr-mad

ಮಡಿಕೇರಿ: ಸ್ಯಾಂಡಲ್ ವುಡ್ ನ ಯಶಸ್ವಿ ಚಿತ್ರ ‘ಕಿರಿಕ್ ಪಾರ್ಟಿ’ಯ ಯಶಸ್ವಿ ಜೋಡಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ವಿರಾಜಪೇಟೆಯ ಸೆರೆನಿಟಿ ಹಾಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಲರ್ ಫುಲ್ ಸಮಾರಂಭದಲ್ಲಿ ರಕ್ಷಿತ್, ರಶ್ಮಿಕಾ ಪರಸ್ಪರ ವಜ್ರದುಂಗುರ ಬದಲಿಸಿಕೊಂಡಿದ್ದಾರೆ. ಬಂಧು, ಬಾಂಧವರು, ಆಪ್ತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ 18 ಕೆ.ಜಿ.ಯ ಕೇಕ್ ಕತ್ತರಿಸಿದ್ದಾರೆ.

ರಕ್ಷಿತ್ ಶೆಟ್ಟಿ ಶಾಂಪೇನ್ ಚಿಮ್ಮಿಸಿದ್ದಾರೆ. ರಕ್ಷಿತ್ ಶೆಟ್ಟಿ ಸೂಟ್ ನಲ್ಲಿ ಮಿಂಚಿದರೆ, ರಶ್ಮಿಕಾ ಪಿಂಕ್ ಗೌನ್ ನಲ್ಲಿ ಗಮನಸೆಳೆದರು.

ಬೆಳಿಗ್ಗೆ ವಿರಾಜಪೇಟೆ ಮುಖ್ಯ ರಸ್ತೆಯ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಲಗ್ನ ಪತ್ರಿಕೆ ಬರೆಸಲಾಯಿತು. ಸಂಜೆ ಸೆರೆನಿಟಿ ಹಾಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಸೆಲೆಬ್ರಿಟಿಗಳು, ಬಂಧುಗಳು ಪಾಲ್ಗೊಂಡು, ರಕ್ಷಿತ್, ರಶ್ಮಿಕಾ ಅವರಿಗೆ ಶುಭ ಹಾರೈಸಿಸಿದ್ದಾರೆ.

ಕೊಡಗು, ಕರಾವಳಿ, ಚೈನೀಸ್ ಶೈಲಿಯ ವಿಶೇಷ ಖಾದ್ಯಗಳನ್ನು ಅತಿಥಿಗಳು ಸವಿದರು. ‘ಕಿರಿಕ್ ಪಾರ್ಟಿ’ ಬಳಿಕ ಇಬ್ಬರೂ ಬೇರೆ, ಬೇರೆ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ. 2 ವರ್ಷಗಳ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...