alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಭಾವನೆಯೇ ಇಲ್ಲದೆ ನಟಿಸಲು ಈಕೆ ರೆಡಿಯಾಗಿದ್ದೇಕೆ?

kim

ಶಾರುಖ್ ಖಾನ್ ರ ‘ಮೊಹಬ್ಬತೇನ್’ ಚಿತ್ರದ ಮೂಲಕ ಜನಪ್ರಿಯಳಾಗಿದ್ದ ನಟಿ ಕಿಮ್ ಶರ್ಮಾ ಬಾಲಿವುಡ್ ನಲ್ಲಿ ಕಮ್ ಬ್ಯಾಕ್ ಮಾಡಲು ಅವಕಾಶಕ್ಕಾಗಿ ಕಾಯ್ತಿದ್ದಾಳೆ. ರೀಎಂಟ್ರಿಗೆ ಕಿಮ್ ಎಷ್ಟು ಉತ್ಸುಕವಾಗಿದ್ದಾಳೆ ಅಂದ್ರೆ, ಸಂಭಾವನೆಯೇ ಇಲ್ಲದೆ ಕೂಡ ನಟಿಸಲು ಸೈ ಎನ್ನುತ್ತಿದ್ದಾಳಂತೆ.

ಉದ್ಯಮಿ ಅನಿಲ್ ಪಂಜಾನಿ ಜೊತೆಗಿನ ಕಿಮ್ ದಾಂಪತ್ಯ ಮುರಿದು ಬಿದ್ದಿದ್ದು. ಅದಾದ್ಮೇಲೆ ಕಿಮ್ ಶರ್ಮಾ ಸಂಪೂರ್ಣ ದಿವಾಳಿಯಾಗಿದ್ದಾಳೆ ಎನ್ನಲಾಗ್ತಾ ಇದೆ. ಆರ್ಥಿಕ ಸಂಕಷ್ಟದಲ್ಲಿರೋ ಈ ನಟಿ ಸದ್ಯ ಜಾವೇದ್ ಜಾಫ್ರಿ ಅವರ ‘ಗುಡ್ ಪಿಚ್ ಇಂಡಿಯಾ’ದಲ್ಲಿ ಕಾಣಿಸಿಕೊಳ್ತಿದ್ದಾಳೆ.

ಅಷ್ಟೇ ಅಲ್ಲ ಡಿಸೈನರ್ ಅರ್ಜುನ್ ಖನ್ನಾ ಜೊತೆಗೆ ಡೇಟಿಂಗ್ ಶುರು ಮಾಡಿದ್ದಾಳೆ ಅನ್ನೋ ಸುದ್ದಿಯೂ ಇದೆ. ಬೇರೊಬ್ಬ ಮಹಿಳೆಯ ಸಂಗಕ್ಕೆ ಬಿದ್ದ ಅನಿಲ್ ಪಂಜಾನಿ, ಕಿಮ್ ಶರ್ಮಾಳನ್ನು ದೂರ ಮಾಡಿದ್ದ. ಅದಾದ್ಮೇಲೆ ಕಿಮ್, ಕೀನ್ಯಾದಿಂದ ಮುಂಬೈಗೆ ಬಂದು ಸೆಟಲ್ ಆಗಿದ್ದಾಳೆ.

2009ರಲ್ಲಿ ತೆಲುಗಿನ ‘ಮಗಧೀರ’ ಚಿತ್ರದಲ್ಲಿ ಕಿಮ್ ನಟಿಸಿದ್ಲು. ಅದಾದ್ಮೇಲೆ ಯಾವ ಸಿನೆಮಾದಲ್ಲೂ ಕಿಮ್ ಗೆ ಚಾನ್ಸ್ ಸಿಕ್ಕಿಲ್ಲ. ಹಾಗಾಗಿ ಈಗ ಸಂಭಾವನೆಯೇ ಇಲ್ಲದೆ ನಟಿಸಲು ಸಿದ್ಧ ಎನ್ನುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...