alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಂಟ ತೋರಿಸಿ ಅಪಹಾಸ್ಯಕ್ಕೀಡಾಗಿದ್ದಾಳೆ ಈ ನಟಿ…!

ಸೊಂಟದ ವಿಷ್ಯಾ ಬ್ಯಾಡವೋ ಶಿಷ್ಯ ಎಂಬ ಹಾಡನ್ನು ಸುಮ್ಮಸುಮ್ಮನೆ ಹಾಡಲಿಲ್ಲ ನೋಡಿ. ಇಲ್ಲೊಬ್ಬ ಮಹಾನ್ ನಟಿ ಕಮ್ ರೂಪದರ್ಶಿ ತನ್ನ ಸೊಂಟವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶನಕ್ಕಿಟ್ಟು ಈಗ ಟ್ರೋಲ್ಸ್ ಮತ್ತು ಮೆಮ್ಸ್ ಪೇಜ್ ಗಳಿಗೆ ಆಹಾರವಾಗಿದ್ದಾಳೆ.

ಆಗಸ್ಟ್ 6ನೇ ತಾರೀಕಿನಂದು ಕಿಮ್ ತನ್ನ ಸೊಂಟದ ಸೌಂದರ್ಯವನ್ನು ಜನರ ಮುಂದಿಡುವ ಸಲುವಾಗಿ ಬೆಡ್ ಮೇಲೆ ಮಲಗಿರುವ ಚಿತ್ರಪಟವೊಂದನ್ನ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಅಕೆ ಮಲಗಿದ್ದ ಭಂಗಿ, ಮುಖದ ಭಾವವನ್ನ ಕೂಡಲೇ ನೆಟ್ಟಿಗರು ತಮಾಷೆ ತಮಾಷೆ ಮಾಡೋದಕ್ಕೆ ಶುರುಮಾಡಿದರು.

ಬೆಡ್ ಮೇಲೆ, ಕ್ರೈಮ್ ಸೀನ್ ಗಳಲ್ಲಿ, ಮ್ಯಾರಥಾನ್ ರೇಸ್ ಗಳಲ್ಲಿ, ಬಾಕ್ಸಿಂಗ್ ಅಖಾಡದಲ್ಲಿ, ಇನ್ನೂ ನಾನಾ ಬಗೆಯಲ್ಲಿ ಆಕೆಯ ಚಿತ್ರಗಳನ್ನ ಫೋಟೋ ಶಾಪ್ ಮಾಡಿ ಕೀಟಳೆ ಮಾಡೋಕೆ ಶುರುಮಾಡಿದ್ರು. ಕಿಮ್ ಈ ಪೋಸ್ಟ್ ದಾಖಲಿಸಿದ ನಂತರದಲ್ಲಿ 61,200 ಲೈಕ್ಸ್ ಮತ್ತು 5200 ರೀಟ್ವೀಟ್ ಗಳು ಬಂದಿದೆ. ಆದ್ರೆ ಅದಕ್ಕಿಂತಲು ಹೆಚ್ಚಾದ ಬಗೆಬಗೆಯ ಟ್ರೋಲ್ ಗಳಿಗೆ ಕಿಮ್ ಕರ್ದಾಶಿಯನ್ ಳ ಈ ಚಿತ್ರ ಒಳಗಾಗಿದೆ.

ಕಿಮ್ ಆ ಚಿತ್ರವನ್ನು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿರುವ ಮಂದಿ ಇದ್ದಕ್ಕಿದ್ದ ಹಾಗೆ ಅಮೆರಿಕದ ಮತ್ತೊಬ್ಬ ಯಂಗ್ ಮಾಡೆಲ್ ಕೆಲ್ಲಿ ಜೆನ್ನರ್ ಅವರೊಂದಿಗೆ ಕಂಪೇರ್ ಮಾಡಲು ಶುರುಮಾಡಿದ್ದಾರೆ. ಕಿಮ್ ಜೊತೆಗೆ ಆಕೆಯ ಇಬ್ಬರು ಸೋದರಿಯರು ಮತ್ತು ಕೆಲ್ಲಿ ಜನ್ನರ್ ಇರುವ ಅಪಹಾಸ್ಯದ ಫೋಟೋವನ್ನ ಕಿಮ್ ಟ್ವಿಟ್ಟರ್ ಖಾತೆಯಲ್ಲಿ ಕೂಡ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...