alex Certify
ಕನ್ನಡ ದುನಿಯಾ       Mobile App
       

Kannada Duniya

3ನೇ ಬಾರಿ ಅಮ್ಮನಾದ ಈ ಬೆಡಗಿ ಶಿಶುವಿಗೆ ನೀಡಿದ್ದಾಳೆ 1.83 ಕೋಟಿ ರೂ. ಟೆಡ್ಡಿಬೇರ್

ಪ್ರಸಿದ್ಧ ಟಿವಿ ರಿಯಾಲಿಟಿ ಶೋ ನಟಿ ಕಿಮ್ ಕರ್ದಾಶಿಯನ್ ಮೂರನೇ ಬಾರಿ ಅಮ್ಮನಾಗಿದ್ದಾಳೆ. ಬಾಡಿಗೆ ತಾಯಿ ಮೂಲಕ ಕಿಮ್ ಮನೆಗೆ ಸೋಮವಾರ ಮಗುವೊಂದರ ಆಗಮನವಾಗಿದೆ. ಮಗಳ ಸ್ವಾಗತಕ್ಕೆ ಕಿಮ್ ಹಾಗೂ ಆಕೆ ಪತಿ ಕೆನ್ನೆ ವೆಸ್ಟ್ ವಿಶೇಷ ತಯಾರಿ ನಡೆಸಿದ್ದಾರೆ.

ಮಗಳು ಮನೆಗೆ ಬರ್ತಿರುವ ವಿಷಯ ಕಿಮ್ ಖುಷಿಗೆ ಕಾರಣವಾಗಿದೆ. ನವಜಾತ ಶಿಶುವಿಗೆ ಕಿಮ್ 1.83 ಕೋಟಿ ಮೌಲ್ಯದ ಟೆಡ್ಡಿ ಬೇರ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾಳೆ. ಇಷ್ಟೇ ಅಲ್ಲ ಮಗಳಿಗಾಗಿ ಕಿಮ್ ನರ್ಸರಿ ಹಾಗೂ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿ ಮಾಡಿದ್ದಾಳೆ. ಇಟಲಿಯಿಂದ ಕಿಮ್ ದುಬಾರಿ ಬೆಲೆಯ ವಸ್ತುಗಳನ್ನು, ಆಟಿಕೆಗಳನ್ನು ಖರೀದಿ ಮಾಡಿದ್ದಾಳೆ ಎನ್ನಲಾಗಿದೆ.

87.35 ಲಕ್ಷದ ಕುದುರೆ, 1.83 ಕೋಟಿ ಬೆಲೆಯ ಟೆಡ್ಡಿ ಬೇರ್ ಜೊತೆ ಮಗು ಹುಟ್ಟುವ ಮೊದಲೇ ಒಂದಿಷ್ಟು ಬಟ್ಟೆಯನ್ನು ಕಿಮ್ ಖರೀದಿ ಮಾಡಿದ್ದಳಂತೆ. ಕಿಮ್ ಪತಿ ಖರ್ಚಿನ ಮೇಲೆ ಹಿಡಿತವಿಡುವಂತೆ ಸಲಹೆ ನೀಡಿದ್ದಾರೆ. ಆದ್ರೆ ಕಿಮ್ ಯಾವುದನ್ನೂ ಕಿವಿಗೆ ಹಾಕಿಕೊಂಡಿಲ್ಲ. ಮೂರು ಮಕ್ಕಳ ಜೊತೆ ರಿಲ್ಯಾಕ್ಸ್ ಆಗಲು ಮಕ್ಕಳಿಗಾಗಿ ಮನೆಯಲ್ಲಿ ವಿಶೇಷ ಸ್ಪಾ ನಿರ್ಮಾಣ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...