alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಕಿಚ್ಚ ಸುದೀಪ್ ರ ಫಿಟ್ನೆಸ್ ಸೀಕ್ರೆಟ್..!

Sudeep

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ರ ಫಿಟ್ನೆಸ್ ಕುರಿತ ಗುಟ್ಟು ರಟ್ಟಾಗಿದೆ. 6 ಅಡಿ 1 ಇಂಚು ಎತ್ತರವಿರುವ ಸುದೀಪ್, ಬಿಡುವಿಲ್ಲದ ಶೂಟಿಂಗ್ ನಡುವೆಯೂ ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದು, ಅದಕ್ಕೆ ಅವರೇನು ಮಾಡುತ್ತಾರೆ ಗೊತ್ತಾ ? ಅದನ್ನು ತಿಳಿಯಲು ಮುಂದೆ ಓದಿ.

ಹಲವಾರು ಇಂಪೋರ್ಟೆಡ್ ಸೈಕಲ್ ಗಳನ್ನು ಹೊಂದಿರುವ ಸುದೀಪ್ ಅವರಿಗೆ ಅದರಲ್ಲಿ ರೌಂಡ್ ಹಾಕುವುದೆಂದರೆ ಬಹಳ ಇಷ್ಟವಂತೆ. ಇದರಿಂದ ದೇಹಕ್ಕೂ ಒಳ್ಳೆಯ ವ್ಯಾಯಾಮ ದೊರೆತಂತಾಗುತ್ತದೆ ಎಂಬುದು ಅವರ ಅಂಬೋಣ. ಅಲ್ಲದೇ ಅನ್ನ ಊಟ ಮಾಡುವುದನ್ನು ಬಿಟ್ಟು ಬಹಳ ಕಾಲವಾಗಿದೆಯಂತೆ. ಮುದ್ದೆ ಅವರ ನೆಚ್ಚಿನ ಆಹಾರ.

ಜಿಮ್ ಗೆ ಹೋಗಿ ದೇಹ ದಂಡಿಸುವುದನ್ನು ಅಷ್ಟೇನೂ ಇಷ್ಟಪಡದ ಸುದೀಪ್, ನಾವು ತಿನ್ನುವ ಆಹಾರದಿಂದಲೇ ದೇಹಾರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಹೇಳುತ್ತಾರೆ. ಬೆಳಗಿನ ಉಪಹಾರಕ್ಕೆ ದಕ್ಷಿಣ ಭಾರತದ ತಿನಿಸನ್ನೇ ಕಿಚ್ಚ ಸುದೀಪ್ ಇಷ್ಟಪಡುತ್ತಾರಾದರೂ ಮಿತಿ ಮೀರಿ ಎಂದಿಗೂ ತಿನ್ನುವುದಿಲ್ಲ. ಮಧ್ಯಾಹ್ನದ ಊಟಕ್ಕೆ ರಾಗಿ ಮುದ್ದೆ ಜೊತೆಗೆ ಸಾಂಬಾರ್ ಹಾಗೂ ರಾತ್ರಿಗೆ ಪಲ್ಯದ ಜೊತೆಗೆ ರಾಗಿ ರೊಟ್ಟಿ ಅಥವಾ ಎರಡು ಚಪಾತಿ ತಿನ್ನುತ್ತಾರಂತೆ. ಪಲ್ಯದ ಬದಲಿಗೆ ಒಮ್ಮೊಮ್ಮೆ ತಂದೂರಿ ಚಿಕನ್ ಬಳಸುವುದೂ ಉಂಟು.

ಶೂಟಿಂಗ್ ಸಂದರ್ಭದಲ್ಲಿ ಲಘು ಉಪಹಾರವಾಗಿ ಹಣ್ಣು ಹಾಗೂ ಜ್ಯೂಸ್ ಕುಡಿಯುವ ಸುದೀಪ್ ಅವರಿಗೆ ಕಾಫಿ, ಟೀ ಕುಡಿಯುವುದೆಂದರೂ ಇಷ್ಟವಂತೆ. ಜಂಕ್ ಫುಡ್ ಸುದೀಪ್ ಅವರಿಗೆ ಇಷ್ಟವಾಗದಿದ್ದರೂ ಮಗಳ ಸಲುವಾಗಿ ಕೆಲವೊಮ್ಮೆ ಸ್ವಲ್ಪ ಟೇಸ್ಟ್ ಮಾಡುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...