alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ ಕಿಚ್ಚ ಸುದೀಪ್

ನಟ ಕಿಚ್ಚ ಸುದೀಪ್ ಈ ವರ್ಷ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆದರೆ ಯಾವುದೇ ರೀತಿಯ ಆಡಂಬರ, ಅದ್ದೂರಿತನಕ್ಕೆ ಅವಕಾಶವಿಲ್ಲ. ಅಷ್ಟೇ ಅಲ್ಲ ಅಭಿಮಾನಿಗಳು ಯಾವುದೇ ಗಿಫ್ಟ್ ಗಳನ್ನೂ ತರುವಂತಿಲ್ಲ ಎಂದು ಕಂಡೀಷನ್ ಕೂಡ ಹಾಕಿದ್ದಾರೆ.

ಕಳೆದ ವರ್ಷ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಗೂಗಲ್ ಪ್ಲಸ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಇದರಿಂದ ಬೇಸರಗೊಂಡ ಅಭಿಮಾನಿಗಳು ನೀವು ನಮಗೆ ಸಿಗುವುದು ಒಂದು ದಿನ ಮಾತ್ರ. ಆದರೆ ಆ ದಿನವನ್ನು ನೀವು ಬೇಡವೆಂದರೆ ನಮ್ಮ ಅಭಿಮಾನಕ್ಕೆ ಅರ್ಥ ಸಿಗಲ್ಲ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಾಗಿ ಸುದೀಪ್ ಹೇಳಿದ್ದಾರೆ.

ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ಮೀಸಲಿಡಲಿರುವ ಸುದೀಪ್, ಆ ದಿನದಂದು ಖರ್ಚು ಮಾಡಬಾರದು, ಅಡಂಬರವಿರಬಾರದು. ನನಗಂತ ಏನೂ ತರಬೇಡಿ, ಶುಭಾಶಯ ತಿಳಿಸಿ ಅಷ್ಟೇ ಸಾಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಾರಿ ಯಾರೂ ಉಡುಗೊರೆ ತರುವಂತಿಲ್ಲ, ತಂದರೂ ನಾನು ಸ್ವೀಕರಿಸುವುದಿಲ್ಲ ಎಂದು ಸುದೀಪ್ ಖಡಾಖಂಡಿತವಾಗಿ ಹೇಳಿದ್ದಾರೆ. ಉಡುಗೊರೆ, ಭಾರಿ ಕೇಕ್ ಗಳಿಗೆ ತಮಗೆ ಖರ್ಚು ಮಾಡುವ ಹಣವನ್ನು ಕೊಡಗಿನ ಸಂತ್ರಸ್ತರಿಗೆ ನೀಡಿ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...