alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಪ್ ಕಾಮ್ಸ್ ಗಿನ್ನು ಕಿಚ್ಚ ಸುದೀಪ್ ರಂಗು

sudeep

ಕನ್ನಡದ ನಟ- ನಟಿಯರು ಇತ್ತೀಚೆಗೆ ಸಂಭಾವನೆ ಪಡೆಯದೇ ಜಾಹಿರಾತಿನಲ್ಲಿ ಕಾಣಿಸಿಕೊಂಡು ಸಾಮಾಜಿಕ ಕಳಕಳಿ ಪ್ರದರ್ಶಿಸುತ್ತಿರುವುದು ಎಲ್ಲರಿಗೂ ಗೊತ್ತು. ಈ ನಡುವೆ ಕನ್ನಡದ ಅಚ್ಚು ಮೆಚ್ಚಿನ ನಟ ಕಿಚ್ಚ ಸುದೀಪ್ ಹಾಪ್ ಕಾಮ್ಸ್ ಗೆ ಬ್ರಾಂಡ್ ಅಂಬಾಸಿಡರ್ ಆಗಿ ಹೊರ ಹೊಮ್ಮಲಿದ್ದಾರೆ.

ಹೌದು. ಈಗಾಗಲೇ ನಟನೆಯ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಕಿಚ್ಚ ಸುದೀಪ್ ಹಾಪ್ ಕಾಮ್ಸ್ ನ ರಾಯಭಾರಿ ಆಗುತ್ತಿದ್ದು, ವಿಶೇಷವೆಂದರೆ ಇದಕ್ಕಾಗಿ ಯಾವುದೇ ಸಂಭಾವನೆ ಪಡೆಯುತ್ತಿಲ್ಲ ಎನ್ನಲಾಗಿದೆ. ರೈತರ ಬೆಳೆಗೆ ಸಮರ್ಪಕ ಬೆಲೆ ಸಿಕ್ಕಿ ಅವರ ಮುಖದಲ್ಲಿ ನಗು ಕಂಡರೆ ತಮಗೆ ಅಷ್ಟೇ ಸಾಕು ಎಂದಿರುವ ಸುದೀಪ್, ಮುಂದಿನ ದಿನದಲ್ಲಿ ರೈತರ ಪರ ಹಾಪ್ ಕಾಮ್ಸ್ ಪ್ರಮೋಷನ್ ಕಾರ್ಯದಲ್ಲಿಯೂ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಕೆಎಂಎಫ್ ಉತ್ಪನ್ನಗಳಿಗೆ ನಟಿ ರಾಗಿಣಿ ಮತ್ತು ನಟ ಪುನೀತ್ ರಾಜ್‍ಕುಮಾರ್, ಹಾಗೆಯೇ ಹೊಸ ಬೆಳಕು ಎಲ್ಇಡಿ ಬಲ್ಬ್ ಯೋಜನೆಗೆ ಮೋಹಕ ತಾರೆ ರಮ್ಯಾ ಮತ್ತು ಪುನೀತ್ ರಾಜ್‍ಕುಮಾರ್ ಈಗಾಗಲೇ ರಾಯಭಾರಿಗಳಾಗಿದ್ದು, ಇದೀಗ ಸುದೀಪ್ ಸಹ ಸಂಭಾವನೆ ಪಡೆಯದೇ ಸದ್ಭಾವನೆಯಿಂದ ರೈತರ ನೆರವಿಗೆ ಧಾವಿಸಿರುವುದು ನಿಜಕ್ಕೂ ಶ್ಲಾಘನೀಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...