alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲ ಭಾಷೆಗಳಲ್ಲೂ “ಕೆಜಿಎಫ್” ಟ್ರೇಲರ್ ಗೆ ಭರ್ಜರಿ ರೆಸ್ಪಾನ್ಸ್

ಬಹುನಿರೀಕ್ಷಿತ, ಅದ್ದೂರಿ ನಿರ್ಮಾಣದ ಪಂಚಭಾಷಾ ಸಿನಿಮಾ “ಕೆಜಿಎಫ್” ಟ್ರೇಲರ್ ಐದೂ ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶದ ಮೂಲೆಮೂಲೆಯ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಎಷ್ಟೆಂದರೆ “ಕೆಜಿಎಫ್”ನ ಕನ್ನಡ ಟ್ರೇಲರ್ ಬಿಡುಗಡೆಯಾದ ಎರಡೇ ಗಂಟೆಗಳಲ್ಲಿ 20 ಲಕ್ಷ ಹಿಟ್ಸ್ ಗಳಿಸಿದೆ. ಇನ್ನು ಬಿಡುಗಡೆಯಾದ 24 ಗಂಟೆಗಳೊಳಗೆ ಅದು 50 ಲಕ್ಷ ತಲುಪಿದೆ.

ಬರೀ ಕನ್ನಡವಷ್ಟೇ ಅಲ್ಲ, ಕೆಜಿಎಫ್‍ನ ಇತರ ನಾಲ್ಕು ಭಾಷೆಗಳಾದ ಹಿಂದಿ, ತಮಿಳು, ತೆಲುಗು, ಮಲಯಾಳಂ ಟ್ರೇಲರ್ ಗೂ ಭಾರಿ ಪ್ರತಿಸ್ಪಂದನೆ ವ್ಯಕ್ತಿಯಾಗಿದೆ. ದಕ್ಷಿಣ ಭಾರತದ ಈ ಸಿನಿಮಾ ಉತ್ತರ ಭಾರತದ ಹಿಂದಿಯಲ್ಲೂ ನಿರ್ಮಾಣವಾಗಿದ್ದು, ಆ ಟ್ರೇಲರ್ ಗೆ  24 ಗಂಟೆಗಳಲ್ಲಿ ಹತ್ತಿರ ಹತ್ತಿರ 6 ದಶಲಕ್ಷ ಹಿಟ್ಸ್ ಬಂದಿದೆ. ಇನ್ನು ಇದರ ತಮಿಳು ಅವತರಣಿಕೆಯ ಹಂಚಿಕೆ ಹಕ್ಕನ್ನು ನಟ ವಿಶಾಲ್ ಪಡೆದಿದ್ದು, ತಮಿಳು ಟ್ರೇಲರ್ ಹಿಟ್ಸ್ 7 ದಶಲಕ್ಷದ ಸಮೀಪಕ್ಕೆ ಹೋಗಿದೆ.

ತೆಲುಗು ಟ್ರೇಲರ್ 24 ಗಂಟೆಗಳಲ್ಲಿ 20 ಲಕ್ಷ, ಮಲಯಾಳಂ ಟ್ರೇಲರ್ 5 ಲಕ್ಷದಷ್ಟು ಹಿಟ್ಸ್ ಪಡೆದಿವೆ. ಇಷ್ಟಕ್ಕೆ ನಿಲ್ಲದೆ ಟ್ರೇಲರ್ ಗೆ  ಹಿಟ್ ಮೇಲೆ ಹಿಟ್ ಬರುತ್ತಿದ್ದು, ಸಿನಿಮಾ ಸೂಪರ್ ಹಿಟ್ ಆಗುವ ಸೂಚನೆಗಳನ್ನು ನೀಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...