alex Certify
ಕನ್ನಡ ದುನಿಯಾ       Mobile App
       

Kannada Duniya

ಭರದಿಂದ ಸಾಗಿದೆ ರಾಕಿಂಗ್ ಸ್ಟಾರ್ ‘ಕೆ.ಜಿ.ಎಫ್.’ ಚಿತ್ರದ ಶೂಟಿಂಗ್

ವರ್ಷದಿಂದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾಯುತ್ತಿರುವ ‘ಕೆ.ಜಿ.ಎಫ್.’ ಚಿತ್ರದ ಚಿತ್ರೀಕರಣ ಮುಂದುವರೆದಿದೆ. ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಚಿತ್ರದ ಫೈಟಿಂಗ್ ದೃಶ್ಯಗಳನ್ನು ಚಿತ್ರೀಕರಿಸಲಾಗ್ತಿದೆ.

ಯಶ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವ ಫೋಟೋ, ಟೀಸರ್ ಈಗಾಗಲೇ ಅಭಿಮಾನಿಗಳು ಮಾತ್ರವಲ್ಲ, ಸಿನಿ ರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿವೆ. 70 -80 ರ ದಶಕದ ಕಥಾಹಂದರವಿರುವ ‘ಕೆ.ಜಿ.ಎಫ್.’ ಚಿತ್ರದ ಚಿತ್ರೀಕರಣ ಕೆ.ಜಿ.ಎಫ್. ಬಳಿ ನಿರ್ಮಿಸಲಾಗಿರುವ ಅದ್ಧೂರಿ ಸೆಟ್ ಮಾತ್ರವಲ್ಲದೇ, ವಿವಿಧ ಕಡೆಗಳಲ್ಲಿ ನಡೆಸಲಾಗಿದೆ.

ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದ್ದ ಟೀಸರ್ ಚಿತ್ರದ ಬಗೆಗಿನ ಕುತೂಹಲವನ್ನು ಹೆಚ್ಚು ಮಾಡಿದೆ. ಇನ್ನೂ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ಬರಲು ಇನ್ನೂ ಸಮಯ ಬೇಕಾಗುತ್ತೆ. ಅಲ್ಲಿವರೆಗೂ ಅಭಿಮಾನಿಗಳು ಕಾಯಲೇಬೇಕಿದೆ. ಪ್ರಶಾಂತ್ ನೀಲ್ ನಿರ್ದೇಶಿಸಿರುವ ಚಿತ್ರವನ್ನು ಹೊಂಬಾಳೆ ಫಿಲಂಮ್ಸ್ ನಿರ್ಮಾಣ ಮಾಡಿದೆ.

ಯಶ್, ಶ್ರೀನಿಧಿ ಶೆಟ್ಟಿ, ಸುರೇಶ್, ಅಯ್ಯಪ್ಪ ಶರ್ಮಾ, ವಸಿಷ್ಠ ಸಿಂಹ, ರಾಮಚಂದ್ರ ರಾಜು, ಅವಿನಾಶ್, ವಿನಯ್ ಮೊದಲಾದವರು ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...