alex Certify
ಕನ್ನಡ ದುನಿಯಾ       Mobile App
       

Kannada Duniya

‘KGF’ ಸೆಟ್ ನಲ್ಲಿ ಇಂತಹ ಕೆಲಸ ಮಾಡಿದ್ದಾರೆ ರಾಧಿಕಾ ಪಂಡಿತ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿದ್ದ ನಟಿ ರಾಧಿಕಾ ಪಂಡಿತ್ ಅವರು ಸನ್ ಗ್ಲಾಸ್ ಕಳವು ಮಾಡಿದ್ದಾರೆ.

ಯಶ್ ಅವರನ್ನು ಭೇಟಿಯಾಗಲು ಸೆಟ್ ಗೆ ಭೇಟಿ ನೀಡಿದ್ದ ರಾಧಿಕಾ, ವಿಶೇಷವಾದ ಹಳದಿ ಕಲರ್ ಸನ್ ಗ್ಲಾಸ್ ಅನ್ನು ಯಾರಿಗೂ ತಿಳಿಯದಂತೆ ತೆಗೆದುಕೊಂಡು ಬಂದಿದ್ದಾರೆ.

ತಾವು ಕದ್ದು ತಂದ ಗ್ಲಾಸ್ ನೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾತ್ರವಲ್ಲ, ‘ಕೆ.ಜಿ.ಎಫ್.’ ಸೆಟ್ ನಿಂದ ಯಾರಿಗೂ ಗೊತ್ತಾಗದಂತೆ ಈ ಗ್ಲಾಸ್ ತಂದಿರುವುದಾಗಿ ತಿಳಿಸಿದ್ದಾರೆ.

ಈ ಕಳವು ವಿಚಾರ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದಷ್ಟು ಬೇಗ ‘ಕೆ.ಜಿ.ಎಫ್.’ ಚಿತ್ರವನ್ನು ಬಿಡುಗಡೆ ಮಾಡುವಂತೆ ಯಶ್ ಹಾಗೂ ನಿರ್ದೇಶಕರಿಗೆ ಹೇಳಿ ಎಂದು ಅಭಿಮಾನಿಗಳು ರಾಧಿಕಾ ಪಂಡಿತ್ ಅವರಿಗೆ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...