alex Certify
ಕನ್ನಡ ದುನಿಯಾ       Mobile App
       

Kannada Duniya

‘ಇದು ಬರೀ ಟ್ರೇಲರ್, ಪಿಕ್ಚರ್ ಅಭಿ ಭೀ ಬಾಕಿ ಹೈ’…!

ಕನ್ನಡಿಗರಿಂದ ನಿರ್ಮಾಣವಾದ, ಕನ್ನಡದ ನಿರ್ದೇಶಕ-ನಟ ಹಾಗೂ ಚಿತ್ರತಂಡದಿಂದ ಮೂಡಿಬಂದಿರುವ ಪಂಚಭಾಷಾ ಸಿನಿಮಾ “ಕೆಜಿಎಫ್” ಈಗ ಟ್ರೇಲರ್ ಮೂಲಕ ದೇಶಾದ್ಯಂತ ಭಾರಿ ಸುದ್ದಿ ಮಾಡುತ್ತಿದೆ.

ಮೊನ್ನೆಮೊನ್ನೆಯಷ್ಟೇ ನಡೆದ ಈ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ನಟ ಯಶ್, ಇದು ಕೇವಲ ನನ್ನ ಸಿನಿಮಾ ಅಲ್ಲ, ಇದು ನಮ್ಮ ಕನಸು ಎಂಬುದಾಗಿ ಹೇಳಿದ್ದಾರೆ.

ಐದು ಭಾಷೆಗಳಲ್ಲಿ ಬಿಡುಗಡೆಯಾದ ಟ್ರೇಲರ್ ಬಗ್ಗೆ ಆಯಾ ಭಾಷೆಗಳಲ್ಲೇ ಮಾತನಾಡಿದ ಯಶ್, ಈ ಚಿತ್ರಕ್ಕಾಗಿ ಎಲ್ಲರೂ ಕಠಿಣ ಪರಿಶ್ರಮ ವಹಿಸಿದ್ದಾರೆ. ಇದಕ್ಕಾಗಿ ನಾವೆಲ್ಲರೂ ಫ್ಯಾಷನೇಟ್ ಆಗಿ ಕೆಲಸ ಮಾಡಿದ್ದೇವೆ ಎನ್ನುವ ಜೊತೆಗೆ, ಚಿತ್ರವಾದ ನಿಜವಾದ ಹೀರೋ ವಿಜಯ್ ಕಿರಗಂದೂರು ಎಂದು ನಿರ್ಮಾಪಕರ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇನ್ನು ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್, ಸಿನಿಮಾಟೋಗ್ರಾಹಕ ಭುವನ್ ಗೌಡ, ಕಲಾ ನಿರ್ದೇಶಕ ಶಿವಕುಮಾರ್ ಅವರನ್ನು ಮುಕ್ತವಾಗಿ ಹೊಗಳಿರುವ ಅವರು, “ಕೆಜಿಎಫ್” ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಸಾಮರ್ಥ್ಯವನ್ನು ಜಗತ್ತಿಗೇ ತೋರಿಸಲು ಹೊರಟಿದ್ದಾರೆ. ಅದನ್ನು ನಾನು ನೋಡಿದ್ದು, ಸದ್ಯದಲ್ಲೇ ಜಗತ್ತೂ ಕಾಣಲಿದೆ. ಇದು ಬರೀ ಟ್ರೇಲರ್, ಪಿಕ್ಚರ್ ಅಭಿ ಭೀ ಬಾಕಿ ಹೈ ಎಂದು ಹೇಳಿ ಯಶ್ ಕುತೂಹಲ ಹುಟ್ಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...