alex Certify
ಕನ್ನಡ ದುನಿಯಾ       Mobile App
       

Kannada Duniya

‘ಶಕೀಲಾ’ಗೋಸ್ಕರ ಇಲ್ಲಿಯೇ ಸೃಷ್ಟಿಯಾಗಿದೆ ಕೇರಳ…!

ಇದೀಗ ಬೆಂಗಳೂರಿನಲ್ಲೂ ಕೇರಳವನ್ನು ಕಾಣಬಹುದು. ಏಕೆಂದರೆ ಕೇರಳದಲ್ಲಿದ್ದಂಥ ಪ್ರದೇಶಗಳೇ ಇಲ್ಲಿವೆ. ಅಂದಹಾಗೆ ಇವೆಲ್ಲ ಆಗಿರುವುದು ಶಕೀಲಾಳಿಂದ ಹಾಗೂ ಶಕೀಲಾಗೋಸ್ಕರ. ಅಂದರೆ ಮಾದಕ ನಟಿ ಶಕೀಲಾ ಜೀವನಾಧಾರಿತ ಹಿಂದಿ ಚಿತ್ರವೇ ಇದಕ್ಕೆಲ್ಲ ಕಾರಣ.

ರಿಚಾ ಚಡ್ಡ ಅಭಿನಯದ ಈ ಸಿನಿಮಾಗೆ ಆಕ್ಷನ್-ಕಟ್ ಹೇಳುತ್ತಿರುವುದು ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್. ಇದು ಕೇರಳ ಮೂಲದ ನಟಿ ಶಕೀಲಾ ಜೀವನಾಧಾರಿತ ಚಿತ್ರವಾದ್ದರಿಂದ ಬಹುಪಾಲು ಅಲ್ಲೇ ಚಿತ್ರೀಕರಣ ಮಾಡಬೇಕಾಗಿತ್ತು.

ಆದರೆ ಇತ್ತೀಚೆಗೆ ಸಂಭವಿಸಿದ ಪ್ರವಾಹ ಹಾಗೂ ಪ್ರಕೃತಿ ವಿಕೋಪದಿಂದ ಕೇರಳ ಇನ್ನೂ ಹಿಂದಿನ ಸ್ಥಿತಿಗೆ ಸಂಪೂರ್ಣವಾಗಿ ಬರದ್ದರಿಂದ ಅಲ್ಲಿ ಶೂಟಿಂಗ್ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿತ್ರತಂಡ ಅಲ್ಲಿಂದ ಲೊಕೇಷನ್ ಶಿಫ್ಟ್ ಮಾಡಿದ್ದು, ಚಿತ್ರೀಕರಣಕ್ಕೆ ಬೇಕಾದ ಕೇರಳದ ಪರಿಸರವನ್ನು ಬೆಂಗಳೂರಿನಲ್ಲೇ ಸಿದ್ಧಪಡಿಸುತ್ತಿದೆ.

ಆದರೆ ಪ್ರಸ್ತುತ ಬೆಂಗಳೂರಿನ ಎಲ್ಲಿ, ಕೇರಳದ ಯಾವ ಪ್ರದೇಶದ ಸೆಟ್ ಹಾಕಿದ್ದಾರೆ, ಅಲ್ಲಿ ಏನೇನೆಲ್ಲ ಇರಲಿವೆ ಹಾಗೂ ಎಷ್ಟು ದಿನಗಳ ಕಾಲ ಶೂಟಿಂಗ್ ನಡೆಯಲಿದೆ ಎಂಬಿತ್ಯಾದಿ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...