alex Certify
ಕನ್ನಡ ದುನಿಯಾ       Mobile App
       

Kannada Duniya

ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ ‘ಶಕೀಲಾ’ ನಾಯಕಿ

ಕೇರಳದಲ್ಲಿ ಜಲ ಪ್ರಳಯ….ಎಲ್ಲಿ ನೋಡಿದ್ರೂ ನೀರು….ಜನರ ಹಾಹಾಕಾರ….ಅನ್ನ ಹಾಗೂ ವಸತಿಗಾಗಿ ಪರದಾಟ….ಇವುಗಳ ನಡುವೆ ಭರದಿಂದ ನಡೆದಿರುವ ರಕ್ಷಣಾ ಕಾರ್ಯ….ದೇವರ ನಾಡು ಕೇರಳ ಪ್ರವಾಹಕ್ಕೆ ನಲುಗಿದೆ. ರಕ್ಷಣಾ ಕಾರ್ಯದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ.

ಶಕೀಲಾ ಜೀವನಾಧಾರಿತ ಚಿತ್ರದ ನಾಯಕಿ ರಿಚಾ ಛಡ್ಡಾ ಸಹ, ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ಕೈ ಜೋಡಿಸಿದ್ದಾರೆ. ಇತ್ತೀಚಿಗೆ ರಿಚಾ, ನಟ ರಾಜೀವ್ ಪಿಳ್ಳೈ ತಮ್ಮ ಮದುವೆಯನ್ನು ಮುಂದೂಡಿ ನೆರೆ ಸಂತ್ರಸ್ತರ ನೆರೆವಿಗೆ ನಿಂತಿರುವ ಬಗ್ಗೆ ಸಾಮಾಜಿಕ ತಾಣದಲ್ಲಿ ಮಾಹಿತಿ ನೀಡಿದ್ದರು. ಸಹ ನಟನ ಕಷ್ಟಕ್ಕೆ ಕರಗಿದ ರಿಚಾ ಛಡ್ಡಾ ಮನಸ್ಸು ಕೇರಳದತ್ತ ಮುಖ ಮಾಡಿದೆ.

ರಾಜೀವ್ ಪಿಳ್ಳೈ ತಮ್ಮ ವಿವಾಹವನ್ನು ಮುಂದೂಡಿ ಸ್ವಗ್ರಾಮಕ್ಕೆ ತೆರಳಿ ನೆರೆ ಪರಿಹಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದ್ರಿಂದ ಪ್ರೇರೇಪಿತರಾದ ರಿಚಾ ಛಡ್ಡಾ ಸಹ, ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಮನುಷ್ಯ ಕಷ್ಟದಲ್ಲಿದ್ದಾಗ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂಬುದನ್ನು ಅರಿತಿರುವ ರಿಚಾ, ಸಹ ನಟ ರಾಜೀವ್ ಪಿಳ್ಳೈ ಅವರೊಂದಿಗೆ ಊರನ್ನು ಕಟ್ಟಲು ಮುಂದಾಗಿದ್ದಾರೆ.

ಇದಕ್ಕೂ ಮುನ್ನ ರಿಚಾ, ಕೇರಳದಲ್ಲಿನ ಪ್ರಾಣಿಗಳಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು. ಅಲ್ಲದೆ 10 ನೇ ತರಗತಿಯವರೆಗೆ 5 ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸೋದಾಗಿಯೂ ಹೇಳಿದ್ದಾರೆ.

ಇಂದ್ರಜಿತ್ ಲಂಕೇಶ್, ಶಕೀಲಾರ ಜೀವನವನ್ನು ಬೆಳ್ಳಿ ಪರದೆಯ ಮೇಲೆ ತರಲು ಸಿದ್ಧರಾಗುತ್ತಿದ್ದಾರೆ. ಈ ಚಿತ್ರದಲ್ಲಿ ಶಕೀಲಾ ಪಾತ್ರದಲ್ಲಿ ರಿಚಾ ಛಡ್ಡಾ ಅಭಿನಯಿಸುತ್ತಿದ್ದು, ರಾಜೀವ್ ಪಿಳ್ಳೈ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...