alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ದಿಲೀಪ್ ದಂಪತಿ

ಮಲಯಾಳಂ ಸಿನಿಮಾ ರಂಗದಲ್ಲಿ ಇತ್ತೀಚೆಗೆ ನಟಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿರುವ ಕಪಲ್ ಅಂದ್ರೆ ದಿಲೀಪ್ ಮತ್ತು ಕಾವ್ಯಾ ಮಾಧವನ್ ಜೋಡಿ. ಕಳೆದ ವರ್ಷ ದಿಲೀಪ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳ ಕಹಿ ಸುದ್ದಿಯನ್ನೇ ಜನರಿಗೆ ನೀಡುತ್ತಾ ಬಂದಿದ್ದರು.

ಆದ್ರೆ ಈಗ ಕಾವ್ಯಾ ಮಾಧವನ್ ಮತ್ತು ದಿಲೀಪ್ ದಂಪತಿಯಿಂದ ಶುಭ ಸುದ್ದಿಯೊಂದು ಬಂದಿದೆ. ಕಾವ್ಯಾ ಮಾಧವನ್ ತಾಯಿಯಾಗ್ತಿದ್ದಾರೆ ಅನ್ನೊ ವಿಚಾರವನ್ನ ದಿಲೀಪ್ ಸ್ನೇಹಿತರು ಮತ್ತು ಆಪ್ತ ವಲಯ ಸ್ಪಷ್ಟಪಡಿಸಿದೆ. 2016ರಲ್ಲಿ ವಿವಾಹ ಬಂಧನಕ್ಕೆ ಒಳಗಾದ ಸಿನಿ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಂತೆ.

ಕಾವ್ಯಾ ಮತ್ತು ದಿಲೀಪ್ ತಮ್ಮ ಮೊದಲ ಸಂಗಾತಿಗಳಿಂದ ವಿಚ್ಚೇದನ ಪಡೆದು 2016 ನವೆಂಬರ್ನಲ್ಲಿ ಮದುವೆಯಾದ್ರು. ಫೇಸ್ಬುಕ್ ಮೂಲಕ ದಿಲೀಪ್ ತಮ್ಮಿಬ್ಬರ ಮದುವೆ ವಿಚಾರದ ಬಗ್ಗೆ ಅಭಿಮಾನಿಗಳಿಗಿದ್ದ ಸಂದೇಹಗಳನ್ನ ನಿವಾರಣೆ ಮಾಡಿದ್ದರು.

ಮದುವೆಯ ನಂತರದಲ್ಲಿ ಕಾವ್ಯಾ ಮಾಧವನ್ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ದಿಲೀಪ್ ನಟಿ ಮೇಲೆ ಹಲ್ಲೆ ನಡೆಸಿದ ಕೇಸ್ ನ ವಿಚಾರಣೆ ಎದುರಿಸುತ್ತಿದ್ದಾರೆ. ಏನೇ ಆದ್ರು ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗ್ತಿರೋದು ಇಬ್ಬರ ಅಭಿಮಾನಿಗಳಿಗೆ ಖುಷಿಯ ಸಂಗತಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...