alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ನಲ್ಲಿ ಬಂದ ಹಣವನ್ನು ಈತ ಮಾಡಿದ್ದೇನು ಗೊತ್ತಾ…?

ನಾನು 100 ಕ್ಕೂ ಹೆಚ್ಚು ಟಿವಿಯ ಗೇಮ್‌ ಶೋಗಳಲ್ಲಿ ಭಾಗವಹಿಸಿದ್ದೇನೆ, ಮತ್ತು ಅವುಗಳನ್ನೆಲ್ಲಾ ಗೆದ್ದಿದ್ದೇನೆ. ನಾನೀಗ ಬಿಗ್ ಬಾಸ್‌ಗೆ ಹೋಗುತ್ತಿದ್ದೇನೆ. ಇದನ್ನೂ ಗೆಲ್ಲುತ್ತೇನೆ ಎಂಬುದಾಗಿ ಕೌಶಲ್ ಮಾಂಡಾ ಅವರು ತೆಲುಗು ಬಿಗ್ ಬಾಸ್ ಸೀಸನ್ 2 ಆರಂಭವಾಗುವ ಕೆಲ ದಿನಗಳ ಮೊದಲು ಹೇಳಿದ್ದರು.

ಫಲಿತಾಂಶದ ಪ್ರಕಟವಾದಾಗ ಇವರ ಮಾತು ನಿಜವಾಗಿತ್ತು. ಕೌಶಲ್‌ರ ಜಯವನ್ನು ನಿರೀಕ್ಷಿಸಿದ್ದ ಕೌಶಲ್ ಆರ್ಮಿ, ಬಿಗ್ ಬಾಸ್ ಮನೆಯಿರುವ ಅನ್ನಪೂರ್ಣ ಸ್ಟುಡಿಯೋದ ಸುತ್ತ ಜಮಾಯಿಸಿತ್ತು. ಕೌಶಲ್ ಮನೆಯಿಂದ ಹೊರಬರುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿದ್ದ ಅಭಿಮಾನಿಗಳ ಚೀರಾಟ, ಸಿಳ್ಳೆ ಮುಗಿಲು ಮುಟ್ಟಿತ್ತು. ಅವರ ಮಣಿಕೊಂಡ ನಿವಾಸದತ್ತ ಸಾಗುತ್ತಿದ್ದಾಗ ರಸ್ತೆಯುದ್ದಕ್ಕೂ ಸಾಲುಗಟ್ಟಿ ಅಭಿಮಾನಿಗಳು ಶುಭ ಹಾರೈಸಲು ನಿಂತಿದ್ದರು.

ಅತ್ಯಂತ ವಿವಾದಿತ ಸೀಸನ್‌ ಆಗಿದ್ದ ಈ ತೆಲುಗು ಬಿಗ್‌ಬಾಸ್‌ನ ಫೈನಲ್‌ಗೆ ಕೌಶಲ್ ಜತೆಗೆ ತಲುಪಿದವರು ಸಾಮ್ರಾಟ್, ತನಿಷ್ ಹಾಗೂ ದೀಪ್ತಿ. ನಿರೂಪಕ ನಾನಿ ಈ ನಾಲ್ವರ 100 ದಿನಗಳ ಪಯಣವನ್ನು ಮೆಲುಕು ಹಾಕಿದರು.

ನಟ ವೆಂಕಟೇಶ್ ಅವರು ವಿಜೇತರ ಹೆಸರು ಘೋಷಿಸಿದರು. ವಿಜೇತ ಕೌಶಲ್ ಮಾತನಾಡಿ, “ಪ್ರತಿ ಬಾರಿ ಯಾರಾದರೊಬ್ಬರು ನನ್ನನ್ನು ಕೆರಳಿಸುವುದು ಅಥವಾ ನನ್ನನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸುತ್ತಲೇ ಇದ್ದರು, ನಾನು ಗೆಲ್ಲಬೇಕು ಎಂಬ ಛಲವೊಂದೇ ನನಗೆ ಶಕ್ತಿ ತುಂಬಿತು. ಇಂದು ನನಗೆ ವಿಶೇಷ ದಿನ. ನಾನು ಬಹುಮಾನವಾಗಿ ಗೆಲ್ಲುವ ಹಣವನ್ನು ದಾನ ನೀಡುವುದಾಗಿ ಹೇಳಿದ್ದೆ. ಕ್ಯಾನ್ಸರ್‌ನಿಂದಾಗಿ ನನ್ನ ತಾಯಿಯನ್ನು ಕಳಕೊಂಡೆ. ಇದೇ ರೀತಿಯ ಸನ್ನಿವೇಶವನ್ನು ಬೇರಾವ ಕುಟುಂಬವೂ ಎದುರಿಸುವುದನ್ನು ನೋಡಲು ನಾನು ಬಯಸುವುದಿಲ್ಲ. ಹಾಗಾಗಿ ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ ಈ 50 ಲಕ್ಷ ರೂ. ನೀಡುವೆ.” ಎಂದು ಪ್ರಕಟಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...