alex Certify
ಕನ್ನಡ ದುನಿಯಾ       Mobile App
       

Kannada Duniya

ರಣಬೀರ್ ವರ್ತನೆಯಿಂದ ಕತ್ರೀನಾಗೆ ಶಾಕ್

katrina- ranbirಈ ವರ್ಷ ವಿವಾಹವಾಗುತ್ತಾರೆಂದೇ ಭಾವಿಸಲಾಗಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಕತ್ರೀನಾ ಕೈಫ್ ಈಗ ದೂರವಾಗಿರುವುದು ಹಳೆಯ ಸಂಗತಿ. ಬ್ರೇಕ್ ಅಪ್ ಆದ ಬಹು ದಿನದ ಬಳಿಕ ಪಾರ್ಟಿಯೊಂದರಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದು, ಈ ವೇಳೆ ರಣಬೀರ್ ಕಪೂರ್ ವರ್ತನೆಯಿಂದ ಕತ್ರೀನಾ ಕೈಫ್ ಘಾಸಿಗೊಳಗಾಗಿದ್ದಾರೆಂದು ಹೇಳಲಾಗಿದೆ.

ರಣಬೀರ್ ಜೊತೆ ಮತ್ತೆ ಬಾಂಧವ್ಯ ಬೆಸೆಯಲು ಕತ್ರೀನಾ ಬಯಸಿದ್ದರೆನ್ನಲಾಗಿದ್ದು, ಕತ್ರೀನಾ ಎದುರಾದರೂ ರಣಬೀರ್ ಕಣ್ಣೆತ್ತಿಯೂ ನೋಡಿಲ್ಲವಂತೆ. ಆದರೂ ಪಟ್ಟು ಬಿಡದ ಕತ್ರೀನಾ ಹತ್ತಿರ ಹೋಗಿ ಮಾತನಾಡಿಸಿದ ವೇಳೆ ತಮ್ಮಿಬ್ಬರ ನಡುವಿನ ಸಂಬಂಧ ಈಗ ಮುಗಿದ ಅಧ್ಯಾಯ ಎಂದು ರಣಬೀರ್ ಸ್ಪಷ್ಟ ಮಾತುಗಳಲ್ಲಿ ಹೇಳಿದರೆನ್ನಲಾಗಿದೆ.

ಇಬ್ಬರ ಸ್ನೇಹಿತರೂ ತಮ್ಮ ನಡುವಿನ ವಿರಸ ಮರೆತು ರಣಬೀರ್ ಹಾಗೂ ಕತ್ರೀನಾ ಒಂದಾಗಬಹುದೆಂಬ ನಿರೀಕ್ಷೆ ಹೊಂದಿದ್ದು, ಆದರೆ ಪಾರ್ಟಿಯಲ್ಲಿನ ರಣಬೀರ್ ವರ್ತನೆಯಿಂದ ಇಬ್ಬರೂ ಮತ್ತೆ ಒಂದುಗೂಡುವ ಸಾಧ್ಯತೆಯಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲದೇ ಕತ್ರೀನಾಗೂ ರಣಬೀರ್ ನನ್ನು ಮರೆತುಬಿಡು ಎಂಬ ಸಲಹೆ ನೀಡಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...