alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಸ್ಟ್ ಆದ ಕೆಲ ಗಂಟೆಗಳಲ್ಲೇ 6 ಲಕ್ಷ ಲೈಕ್ಸ್ ಪಡೆದಿದೆ ಈ ನಟಿಯ ಫೋಟೋ

ಬಾಲಿವುಡ್ ನಟಿ ಕತ್ರಿನಾ ಕೈಫ್ ಸದ್ಯ ಉತ್ತರ ಅಮೆರಿಕಾದಲ್ಲಿದ್ದಾರೆ. ದಬಾಂಗ್ ಸರಣಿಯ ಚಿತ್ರಕ್ಕಾಗಿ ಕತ್ರಿನಾ ಅಲ್ಲಿಗೆ ತೆರಳಿದ್ದು, ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್, ಸೋನಾಕ್ಷಿ ಸಿನ್ಹಾ, ಪ್ರಭುದೇವ ಮೊದಲಾದವರು ಸಾಥ್ ನೀಡಿದ್ದಾರೆ.

ಇದರ ಮಧ್ಯೆ ಶಾರುಕ್ ಜೊತೆಗಿನ ಕತ್ರಿನಾ ಕೈಫ್ ಅಭಿನಯದ ‘ಜೀರೋ’ ಚಿತ್ರ ಕೂಡ ಬಿಡುಗಡೆಗೆ ಸಿದ್ದವಾಗಿದ್ದು, ಅನುಷ್ಕಾ ಶರ್ಮಾ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಗುರುವಾರದಂದು ಕತ್ರಿನಾ ಕೈಫ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು, ಭಾರಿ ಸದ್ದು ಮಾಡುತ್ತಿದೆ.

ವೋಗ್, ಜಿಕ್ಯು ಮೊದಲಾದ ಜನಪ್ರಿಯ ಮ್ಯಾಗಜಿನ್ ಗಳಿಗೆ ಫೋಟೋ ತೆಗೆಯುವ ಖ್ಯಾತ ಫೋಟೋಗ್ರಾಫರ್ ತರುಣ್ ವಿಶ್ವ, ಕತ್ರಿನಾಳ ಈ ಫೋಟೋ ತೆಗೆದಿದ್ದಾರೆ ಎಂದು ಹೇಳಲಾಗಿದ್ದು, ಇದನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ತರುಣ್ ವಿಶ್ವ ಈ ಹಿಂದೆ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಸೋನಂ ಕಪೂರ್ ಮೊದಲಾದವರ ಫೋಟೋಗಳನ್ನು ಮ್ಯಾಗಜಿನ್ ಗಾಗಿ ತೆಗೆದಿದ್ದರು.

Malang 📷 #tarunvishwa

A post shared by Katrina Kaif (@katrinakaif) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...