alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಮ್ ಗೆ ಗುಡ್ ಬೈ ಹೇಳಿದ ಕತ್ರಿನಾ….

ಬಾಲಿವುಡ್ ನಟಿ ಕತ್ರಿನಾ ಕೈಫ್ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾಳೆ. ಹೆಚ್ಚಿನ ಸಮಯವನ್ನು ಜಿಮ್ ನಲ್ಲಿ ಕಳೆಯುವ ಕತ್ರಿನಾ ಫಿಟ್ನೆಸ್ ಅಭಿಮಾನಿಗಳ ಹುಬ್ಬೇರಿಸಿದೆ. ಕತ್ರಿನಾ ಫಿಟ್ನೆಸ್ ಬಗ್ಗೆ ಅಭಿಮಾನಿಗಳು ಆಗಾಗ ಮಾತನಾಡ್ತಿರುತ್ತಾರೆ. ಕತ್ರಿನಾ ಕೂಡ ಜಿಮ್ ವರ್ಕ್ಔಟ್ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕ್ತಿರುತ್ತಾಳೆ.

ಈಗ ಕತ್ರಿನಾ ಇನ್ನೊಂದು ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ. ಯಾಸ್ಮಿನ್ ಕರಾಚಿವಾಲಾರಿಂದ ತರಬೇತಿ ಪಡೆಯುತ್ತಿದ್ದ ಕತ್ರಿನಾ ಈ ಫೋಟೋ ಮೂಲಕ ಅಭಿಮಾನಿಗಳು ಆಘಾತಗೊಳ್ಳುವಂತಹ ವಿಷ್ಯ ಹೇಳಿದ್ದಾಳೆ. ಜಿಮ್ ನಲ್ಲಿ ಇದು ನನ್ನ ಕೊನೆ ಫೋಟೋ. ಬಾಯ್ ಬಾಯ್ ಜಿಮ್. 10 ವರ್ಷಗಳ ನಂತ್ರ ನಾವು ಹೊಸ ಜಾಗಕ್ಕೆ ಹೋಗ್ತಿದ್ದೇವೆ ಎಂದು ಕತ್ರಿನಾ ಹೇಳಿದ್ದಾಳೆ.

ವಾಸ್ತವವಾಗಿ ಕತ್ರಿನಾ ಜಿಮ್ ಗೆ ವಿದಾಯ ಹೇಳ್ತಿಲ್ಲ. ಯಾಸ್ಮಿನ್ ಜಿಮ್ ಬದಲಾಯಿಸ್ತಿದ್ದಾರೆ. ಬೇರೆ ಸ್ಥಳಕ್ಕೆ ಜಿಮ್ ಸ್ಥಳಾಂತರವಾಗ್ತಿದೆ. ಈ ಜಾಗದಲ್ಲಿ ಇದು ಕೊನೆ  ದಿನ ಎಂಬುದು ಕತ್ರಿನಾ ಮಾತಿನ ಅರ್ಥವಾಗಿದೆ. ಡಾನ್ಸ್ ಹಾಗೂ ಜಿಮ್ ನನ್ನ ಜೀವನದ ಒಂದು ಭಾಗ ಎಂದು ಕತ್ರಿನಾ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದಳು. ಸದ್ಯ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಕತ್ರಿನಾ ನಟಿಸ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...