alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ರೀನಾಳ ಫೇವರಿಟ್ ಕ್ರಿಕೆಟರ್ ಯಾರು ಗೊತ್ತಾ?

590050-dravid-katrina

ಈಗ ಎಲ್ಲಾ ಕಡೆ ಐಪಿಎಲ್ ಜ್ವರ ಶುರುವಾಗಿದೆ. ಒಬ್ಬೊಬ್ಬರಿಗೆ ಒಂದೊಂದು ತಂಡ ಫೇವರಿಟ್. ಬಾಲಿವುಡ್ ಸ್ಟಾರ್ ಗಳಿಗೆ ಕೂಡ ಕ್ರಿಕೆಟ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಝ್ ಇದೆ. ಆದ್ರೆ ಖ್ಯಾತ ನಟೀಮಣಿಯರು ಹೆಚ್ಚಾಗಿ ಇಷ್ಟಪಡುವ ಆಟಗಾರರು ಯಾರು ಅನ್ನೋದನ್ನು ತಿಳಿದುಕೊಳ್ಳೋ ಕುತೂಹಲ ಅಭಿಮಾನಿಳಲ್ಲಿದೆ.

ಮೊನ್ನೆ ಮೊನ್ನೆಯಷ್ಟೆ ತಮ್ಮ ಫೇವರಿಟ್ ಕ್ರಿಕೆಟಿಗ ಯಾರು ಅನ್ನೋದನ್ನು ನಟಿ ಸನ್ನಿ ಲಿಯೋನ್ ಬಹಿರಂಗಪಡಿಸಿದ್ರು. ಮಹೇಂದ್ರ ಸಿಂಗ್ ಧೋನಿ ಅಂದ್ರೆ ಅಚ್ಚುಮೆಚ್ಚು ಅಂತಾ ಹೇಳಿಕೊಂಡಿದ್ರು. ಈಗ ಕತ್ರೀನಾ ಕೈಫ್ ಸರದಿ.

ಕತ್ರೀನಾಗೆ ಟೀಂ ಇಂಡಿಯಾದ ಗೋಡೆ ಎನಿಸಿಕೊಂಡಿದ್ದ ರಾಹುಲ್ ದ್ರಾವಿಡ್ ನೆಚ್ಚಿನ ಕ್ರಿಕೆಟಿಗನಂತೆ. ಅವರೊಬ್ಬ ಜಂಟಲ್ ಮ್ಯಾನ್, ಮೈದಾನದಲ್ಲಿ ಕೋಪ, ಬೇಸರ ಯಾವುದನ್ನೂ ತೋರ್ಪಡಿಸಿಕೊಳ್ಳದೆ ಗೌರವಯುತವಾಗಿ ನಡೆದುಕೊಳ್ತಾರೆ ಅಂತಾ ಕತ್ರೀನಾ ಹೇಳಿದ್ದಾರೆ.

ರಾಹುಲ್ ತುಂಬಾ ನಾಚಿಗೆ ಸ್ವಭಾವದವರಾಗಿದ್ರಿಂದ ಹೆಚ್ಚು ಮಾತನಾಡಿಲ್ಲ. ಅವರ ಜೊತೆಗೆ ಆಡಿದ್ದು ಮೂರೇ ಮಾತು ಅಂತಾನೂ ಕತ್ರೀನಾ ಹೇಳಿಕೊಂಡಿದ್ದಾರೆ. 2008ರಲ್ಲಿ ರಾಹುಲ್ ದ್ರಾವಿಡ್, ಆರ್ ಸಿ ಬಿ ಫ್ರಾಂಚೈಸಿ ತಂಡದ ಕ್ಯಾಪ್ಟನ್ ಆಗಿದ್ರು. ಆಗ ಕತ್ರೀನಾ ಕೂಡ ಆರ್ ಸಿಬಿ ಪ್ರಮೋಷನಲ್ ಈವೆಂಟ್ ಗಳಲ್ಲಿ ಭಾಗಿಯಾಗಿದ್ರು. ಈ ವೇಳೆ ದ್ರಾವಿಡ್ ರನ್ನು ಭೇಟಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...