alex Certify
ಕನ್ನಡ ದುನಿಯಾ       Mobile App
       

Kannada Duniya

ಅಸಹಿಷ್ಣುತೆ ಬಗ್ಗೆ ಕತ್ರಿನಾ ಕೈಫ್ ಹೇಳಿದ್ದೇನು..?

katrina-kaif45

ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಪತ್ನಿ, ದೇಶ ಬಿಟ್ಟುಹೋಗುವ ಬಗ್ಗೆ, ನನ್ನೊಂದಿಗೆ ಮಾತನಾಡಿದ್ದಳು ಎಂದು ಬಾಲಿವುಡ್ ನಟ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ದೇಶದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಅದಾದ ನಂತರದಲ್ಲಿ ದೇಶದಲ್ಲಿ ಪರ, ವಿರೋಧದ ಚರ್ಚೆ ಕಾವೇರಿತ್ತು.

ಅಮೀರ್ ಖಾನ್, ಶಾರುಖ್ ಖಾನ್, ಅನುಪಮ್ ಖೇರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಫಿತೂರ್’ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿಯಾಗಿರುವ ಕತ್ರಿನಾ ಸಂದರ್ಶನವೊಂದರಲ್ಲಿ ಮಾತನಾಡಿ, ಭಾರತದಲ್ಲಿ ಅಸಹಿಷ್ಣುತೆ ಇಲ್ಲ. ಇಲ್ಲಿ ಸಹಿಷ್ಣುತೆ ಇದೆ. ವಿಶ್ವದಲ್ಲಿಯೇ ವಾಸಿಸಲು ಅತ್ಯಂತ ಯೋಗ್ಯವಾದ ದೇಶ ಭಾರತ ಎಂದು ಹೇಳಿದ್ದಾರೆ.

ಅಲ್ಲದೇ, ಭಾರತದಂತಹ ದೇಶದಲ್ಲಿ ನೆಲೆಸುವುದು ಸಂತಸದ ವಿಷಯ. ನಾನು ನನ್ನ ಸಂಪೂರ್ಣ ಜೀವನವನ್ನು ಇಲ್ಲಿಯೇ ಕಳೆಯುತ್ತೇನೆ. ಸಹಿಷ್ಣುತೆ, ಅಸಹಿಷ್ಣುತೆ ಬಗ್ಗೆ ನಾನು ಪಾಠ ಮಾಡುವಷ್ಟು ತಿಳಿದಿಲ್ಲ. ಆದರೆ, ಭಾರತ ಸಹಿಷ್ಣುತೆ ಇರುವ ದೇಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...