alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಅಪ್ ನಿಂದ ಕತ್ರಿನಾ ಕೈ ತಪ್ಪಿದ ದೊಡ್ಡ ಡೀಲ್

katrina-

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್, ರಣಬೀರ್ ಜೊತೆ ಬ್ರೇಕ್ ಅಪ್ ಮಾಡಿಕೊಂಡು ತಿಂಗಳೇ ಕಳೆದಿದೆ. ಆದ್ರೆ ಇದರ ಪರಿಣಾಮವನ್ನು ಈಗ ಎದುರಿಸುವಂತಾಗಿದೆ. ದೊಡ್ಡ ಜಾಹೀರಾತು ಡೀಲೊಂದು ಕತ್ರಿನಾ ಕೈ ತಪ್ಪಿ ಹೋಗಿದೆ.

ಈ ಹಿಂದೆ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ತಾ ಇದ್ರು. ಕಂಪನಿ ಹೊಸ ಜೋಡಿಯ ಹುಟುಕಾಟದಲ್ಲಿತ್ತು. ಆಗ ಕಣ್ಣಿಗೆ ಬಿದ್ದಿದ್ದು ರಣಬೀರ್ ಹಾಗೂ ಕತ್ರಿನಾ. ಕಂಪನಿ ಮ್ಯಾನೇಜರ್ ಗಳ ಜೊತೆ ಮಾತುಕತೆ ನಡೆಸಿತ್ತಂತೆ.

ಈ ನಡುವೆ ಬಾಲಿವುಡ್ ಹಾಟ್ ಜೋಡಿ ಬೇರೆ ಬೇರೆಯಾಗಿದ್ದಾರೆ. ಮತ್ತೆ ಒಂದಾಗಬಹುದು, ಹೊಸ ರಾಯಭಾರಿ ಸಿಗಬಹುದೆಂಬ ನಿರೀಕ್ಷೆಯಲ್ಲಿ ಕಂಪನಿ ಕೆಲ ದಿನಗಳ ಕಾಲ ಕಾದು ನೋಡಿದೆ. ಆದ್ರೆ ಇಬ್ಬರು ಮತ್ತೆ ಒಂದಾಗುವ ಲಕ್ಷಣ ಕಾಣದ ಕಾರಣ ಕಂಪನಿ ತನ್ನ ಒಪ್ಪಂದವನ್ನು ಮುರಿದುಕೊಂಡಿದೆ. ಹಾಗಾಗಿ ಈಗ ಮತ್ತೆ ಹೊಸ ಜೋಡಿಯ ಹುಡುಕಾಟದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...