alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ರಿನಾ ಕೋಪಕ್ಕೆ ಕಾರಣವಾಯ್ತು ಚಾಲಕನ ಈ ಕೆಲ್ಸ

katrina-kaif-accuses-driver-of-leaking-personal-information-about-herವೈಯಕ್ತಿಕ ವಿಚಾರಗಳಿಗೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಮಹತ್ವ ನೀಡ್ತಾಳೆ. ಆಕೆಯ ವೈಯಕ್ತಿಕ ವಿಚಾರಗಳು ಬಹಿರಂಗವಾಗದಂತೆ ನೋಡಿಕೊಳ್ತಾಳೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಆಕೆ ಗುಟ್ಟಾಗಿಟ್ಟ ವಿಷಯಗಳು ಬಹಿರಂಗವಾಗ್ತಿದೆ. ಇದಕ್ಕೆ ಆಕೆಯ ಕಾರು ಚಾಲಕ ಕಾರಣ ಎನ್ನೋದು ಗೊತ್ತಾಗಿದೆ.

ವೈಯಕ್ತಿಕ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡ್ತಾ ಇರುವ ಚಾಲಕನ ಮೇಲೆ ಕತ್ರಿನಾ ಕಿಡಿ ಕಾರಿದ್ದಾಳೆನ್ನಲಾಗಿದೆ. ಕೆಲಸದಿಂದ ತೆಗೆದು ಹಾಕುವ ಬೆದರಿಕೆಯೊಡ್ಡಿದ್ದಾಳಂತೆ. ಕೆಲ ದಿನಗಳ ಹಿಂದೆ ಕತ್ರಿನಾ ತನ್ನ ಸ್ನೇಹಿತ ಆದಿತ್ಯ ರಾಯ್ ಕಪೂರ್ ಜೊತೆ ಡಿನ್ನರ್ ಗೆ ಹೋಗಿದ್ಲು. ಈ ವಿಷಯ ಕತ್ರಿನಾಗೆ ಬಿಟ್ಟರೆ ಆಕೆ ಕಾರು ಚಾಲಕನಿಗೆ ಮಾತ್ರ ಗೊತ್ತಿತ್ತು. ಆದ್ರೆ ಮಾಧ್ಯಮಗಳಲ್ಲಿ ಈ ವಿಷಯ ಬಿತ್ತರವಾಗಿದೆ. ಗುಟ್ಟಾಗಿಟ್ಟ ವಿಚಾರ ಹೇಗೆ ಲೀಕ್ ಆಯ್ತು ಎಂಬುದನ್ನು ಪತ್ತೆ ಹಚ್ಚಲು ಹೋದ ಕತ್ರಿನಾ ಕಣ್ಣಿಗೆ ಬಿದ್ದಿದ್ದು ಡ್ರೈವರ್. ಈ ಹಿಂದೆ ಕೂಡ ಅನೇಕ ವಿಷಯಗಳು ಲೀಕ್ ಆಗಿವೆ. ಹಾಗಾಗಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ ಕತ್ರಿನಾ.

ಕತ್ರಿನಾ ಅಭಿನಯದ ‘ಬಾರ್ ಬಾರ್ ದೇಖೋ’ ಚಿತ್ರಕ್ಕೆ ಯಶಸ್ಸು ಸಿಗಲಿಲ್ಲ. ಈಗ ಮಾಜಿ ಪ್ರಿಯಕರ ಸಲ್ಮಾನ್ ಖಾನ್ ಜೊತೆ ಕತ್ರಿನಾ ರೋಮ್ಯಾನ್ಸ್ ಮಾಡಲಿದ್ದಾಳೆ. ‘ಟೈಗರ್ ಜಿಂದಾ ಹೇ’ ಚಿತ್ರ ಸದ್ಯದಲ್ಲಿಯೇ ಶೂಟಿಂಗ್ ಶುರುಮಾಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...