alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳನ್ನು ಪಡೆಯಲು 14 ಬಾರಿ ಐವಿಎಫ್ ಮಾಡಿಕೊಂಡ ನಟಿ

ಹಾಸ್ಯನಟ ಕೃಷ್ಣ ಅಭಿಷೇಕ್ ಹಾಗೂ ಪತ್ನಿ ಕಾಶ್ಮೀರಾ ಷಾ ಒಂದು ವರ್ಷದ ಹಿಂದೆ ಅವಳಿ ಮಕ್ಕಳ ಪಾಲಕರಾಗಿದ್ದಾರೆ. ಇಬ್ಬರೂ ಲಾಸ್ ವೆಗಾಸ್ ನಲ್ಲಿ ಮದುವೆಯಾಗಿದ್ದರು. ಮದುವೆ ವಿಚಾರವನ್ನು ಗುಪ್ತವಾಗಿಟ್ಟಿದ್ದ ಜೋಡಿ 2015ರಲ್ಲಿ ಮದುವೆಯಾಗಿರುವುದಾಗಿ ಹೇಳಿದ್ದರು. ಮದುವೆಯಿಂದ ಹಿಡಿದು ಮಕ್ಕಳನ್ನು ಪಡೆಯುವವರೆಗೆ ದಂಪತಿ ಪ್ರಯಾಣ ಸುಲಭವಾಗಿರಲಿಲ್ಲ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಾಶ್ಮೀರಾ ಷಾ ಆ ದಿನಗಳ ಬಗ್ಗೆ ಹೇಳಿದ್ದಾಳೆ.

2012ರಲ್ಲಿ ಕೃಷ್ಣ ಜೊತೆ ಮದುವೆಯಾದೆ. ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದಿದ್ದೇನೆ. ವಂಶಾಭಿವೃದ್ಧಿಗೆ ಇನ್ನಿಲ್ಲದ ಪ್ರಯತ್ನ ಮಾಡಿದ್ದೇನೆ. ಸತತ ಮೂರು ವರ್ಷ ಮಕ್ಕಳನ್ನು ಪಡೆಯಲು ಪ್ರಯತ್ನಿಸಿದ್ದೆ. ಇದಕ್ಕಾಗಿ ನನ್ನ ವೃತ್ತಿಯಿಂದ ದೂರವಿದ್ದೆ ಎಂದು ಕಾಶ್ಮೀರಾ ಹೇಳಿದ್ದಾಳೆ.

ನಾನು ಮಕ್ಕಳಿಗಾಗಿ ಐವಿಎಫ್ ಆಶ್ರಯಿಸಿದ್ದೆ. 14 ಬಾರಿ ಗರ್ಭಾವಸ್ಥೆಯ ಪ್ರಯತ್ನ ವಿಫಲವಾಯ್ತು. ಇದ್ರಿಂದ ನನ್ನ ತೂಕ ಹೆಚ್ಚಾಯ್ತು. ಫಿಗರ್ ಉಳಿಸಿಕೊಳ್ಳಲು ನಾನು ಗರ್ಭ ಧರಿಸಲಿಲ್ಲ ಎಂಬುದು ಸುಳ್ಳು. ಹೆಣ್ಣು ಮಗುವನ್ನು ನಾವು ಬಯಸುತ್ತಿದ್ದೇವೆ. ಆದ್ರೆ ಅವಳಿ ಗಂಡು ಮಕ್ಕಳು ಜನಿಸಿವೆ. ಶೀಘ್ರದಲ್ಲಿಯೇ ಹೆಣ್ಣು ಮಗು ಮನೆಗೆ ಬರಲಿದೆ ಎಂದು ಕಾಶ್ಮೀರಾ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...