alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಶಿನಾಥ್ ಗೆ ಅಭಿಮಾನಿಗಳಿಂದ ಅಂತಿಮ ನಮನ

ಬೆಂಗಳೂರು: ಬೆಳಿಗ್ಗೆ ನಿಧನರಾದ ಹಿರಿಯ ನಟ, ನಿರ್ಮಾಪಕ ಕಾಶಿನಾಥ್ ಅವರ ಪಾರ್ಥಿವ ಶರೀರವನ್ನು, ಜಯನಗರ 3 ನೇ ಕ್ರಾಸ್ ನಲ್ಲಿರುವ ಅವರ ನಿವಾಸಕ್ಕೆ ತರಲಾಗಿದೆ.

ಮನೆಯಲ್ಲಿ ಅಂತಿಮ ಕಾರ್ಯಗಳನ್ನು ನಡೆಸಲಾಗ್ತಿದೆ. ದುಬೈನಿಂದ ಹೊರಟಿರುವ ಅವರ ಪುತ್ರಿ ಅಮೃತ ವರ್ಷಿಣಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ಸೇರಿದಂತೆ ಕುಟುಂಬದವರು, ಬಂಧು ಬಳಗದವರು ಮನೆಯಲ್ಲಿ ಅಂತಿಮ ದರ್ಶನ ಪಡೆದ ನಂತರ, ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.

ಅಂತ್ಯಸಂಸ್ಕಾರಕ್ಕೆ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾಧ್ವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಕಾಶಿನಾಥ್ ಅವರ ಅಭಿಮಾನಿಗಳು, ಚಿತ್ರರಂಗದ ಕಲಾವಿದರು, ಗಣ್ಯರು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ರುದ್ರಭೂಮಿಯ ಬಳಿ ಅಪಾರ ಅಭಿಮಾನಿಗಳು ನೆರೆದಿದ್ದು, ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...