alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಗೇಜ್ ಆದ ಜೋಡಿಯ ನಡುವೆ ಈ ನಟಿಯ ಎಂಟ್ರಿ…?

ಚಿತ್ರರಂಗದಲ್ಲಿ ಗಾಸಿಪ್ ಗಳಿಗೆ ಬರವೇನೂ ಇರಲ್ಲ, ಗಾಸಿಪ್ ಗಳು ಕೆಲವೊಮ್ಮೆ ಭಾರೀ ಚರ್ಚೆಗೆ ಒಳಗಾದರೆ, ಮತ್ತೊಮ್ಮೆ ತಣ್ಣಗಾಗುತ್ತವೆ. ಆದರೆ, ಚಿತ್ರರಂಗದಲ್ಲಿ ನಟಿ ಕಾರುಣ್ಯ ರಾಮ್ ಅವರ ವಿಚಾರವೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ನಿಶ್ಚಿತಾರ್ಥ ಮಾಡಿಕೊಂಡ ಜೋಡಿಯ ನಡುವೆ ಕಾರುಣ್ಯ ರಾಮ್ ಎಂಟ್ರಿಯಾಗಿದ್ದಾರೆ. ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಖ್ಯಾತಿಯ ನಟಿ ಕುಮುದಾ ಅಲಿಯಾಸ್ ಅನಿಕಾ ಹಾಗೂ ಉದ್ಯಮಿ ಸಚಿನ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸ್ಯಾಂಡಲ್ ವುಡ್ ನಟಿ ಕಾರುಣ್ಯ ರಾಮ್ ಕಾರಣದಿಂದ ನಿಶ್ಚಿತಾರ್ಥ ಬ್ರೇಕಪ್ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸಚಿನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಕಾರುಣ್ಯ ಕಾಟ ಕೊಡುತ್ತಿದ್ದಾರಂತೆ. ಈ ಮೊದಲು ಕಾರುಣ್ಯ ಹಾಗೂ ಸಚಿನ್ ಪ್ರೀತಿಸಿದ್ದು, ಕೆಲವು ವರ್ಷಗಳ ಹಿಂದೆ ಇಬ್ಬರೂ ದೂರವಾಗಿದ್ದಾರೆ. ಬ್ರೇಕಪ್ ಬಳಿಕ, ಸಚಿನ್, ಅನಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವಿಚಾರ ತಿಳಿದ ಕಾರುಣ್ಯ ಮತ್ತೆ ಸಚಿನ್ ಮತ್ತು ಅವರ ಕುಟುಂಬದವರಿಗೆ ಕಾಟ ಕೊಡುತ್ತಿದ್ದಾರೆ ಎನ್ನಲಾಗಿದೆ.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾರುಣ್ಯ, ನನಗೆ ಅನಿಕಾ ಯಾರೆಂಬುದೇ ಗೊತ್ತಿಲ್ಲ. ಇತ್ತೀಚೆಗೆ ಸಚಿನ್ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಎಲ್ಲರ ಎದುರಲ್ಲೇ ಮಾತನಾಡಿಸಿದ್ದೇನೆ ಹೊರತು, ಯಾರಿಗೂ ತೊಂದರೆ ಕೊಟ್ಟಿಲ್ಲ. ಅನಿಕಾ ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡ್ತಿರಬಹುದೆಂದು ಹೇಳಿದ್ದಾರೆ. ಈ ವಿಚಾರವೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ಸೀಸನ್ ನಲ್ಲಿ ‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ಕಾರುಣ್ಯ, ‘ವಜ್ರಕಾಯ’, ‘ಎರಡು ಕನಸು’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...