alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್..! ಟಿವಿ ಶೋ ನಲ್ಲೇ ಖಡ್ಗ ಇರಿದ ಕರ್ಣಿ ಸೇನಾ ಮುಖಂಡ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರ ಬಿಡುಗಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ರಜಪೂತ್ ಕರ್ಣಿ ಸೇನಾ ಭಾರೀ ಪ್ರತಿಭಟನೆ ನಡೆಸುತ್ತಿದೆ. ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆಯೇ ಚಿತ್ರ ತಂಡದ ಮೇಲೆ ದಾಳಿ ನಡೆಸಲಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೈಲರ್ ಪ್ರದರ್ಶಿಸಿದ ಕಾರಣಕ್ಕೆ ಚಿತ್ರಮಂದಿರವೊಂದನ್ನು ಧ್ವಂಸ ಮಾಡಲಾಗಿದೆ.

ಅಲ್ಲದೇ ‘ಪದ್ಮಾವತಿ’ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಲೆ ತಂದು ಕೊಟ್ಟವರಿಗೆ ಕೋಟ್ಯಾಂತರ ರೂಪಾಯಿ ಬಹುಮಾನ ನೀಡುವುದಾಗಿ ಕರ್ಣಿ ಸೇನಾ ಮುಖಂಡನೊಬ್ಬ ಘೋಷಿಸಿದ್ದು, ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ದೀಪಿಕಾಳ ಮೂಗನ್ನು ಶೂರ್ಪಣಖಿಯಂತೆ ಕತ್ತರಿಸುವುದಾಗಿ ಬೆದರಿಕೆಯೊಡ್ಡಲಾಗಿದೆ.

ಈ ಹಿನ್ನಲೆಯಲ್ಲಿ ಸಂಜಯ್ ಲೀಲಾ ಬನ್ಸಾಲಿ ಹಾಗೂ ದೀಪಿಕಾ ಪಡುಕೋಣೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದರ ಮಧ್ಯೆ ‘ಟೈಮ್ಸ್ ನೌ’ ನ ಚರ್ಚಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕರ್ಣಿ ಸೇನಾ ಮುಖಂಡನೊಬ್ಬ ಬಹಿರಂಗವಾಗಿಯೇ ಖಡ್ಗ ಇರಿದು ಉದ್ದಟತನ ಮೆರೆದಿದ್ದಲ್ಲದೇ ಚಿತ್ರತಂಡದ ವಿರುದ್ದ ಕಿಡಿ ಕಾರಿದ್ದಾನೆ.

ವಿಪರ್ಯಾಸವೆಂದರ ಕಾರ್ಯಕ್ರಮ ನಿರೂಪಕರು ಮೇವಾಡ್ ರಾಜಮನೆತನದ ಇತಿಹಾಸದ ಕುರಿತು ಕೇಳಿದ ಪ್ರಶ್ನೆಗಳಿಗೆ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಬಳಿ ಉತ್ತರವೇ ಇರಲಿಲ್ಲ. ಕೊನೆಗೆ ‘ಟೈಮ್ಸ್ ನೌ’ ನಿರೂಪಕರು ಖಡ್ಗ ಇರಿದು ಬಹಿರಂಗ ಶಕ್ತಿ ಪ್ರದರ್ಶನ ಮಾಡಿದ್ದರ ಕುರಿತು ತರಾಟೆಗೆ ತೆಗೆದುಕೊಂಡ ಬಳಿಕ ಮೌನ ವಹಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಬಹಿರಂಗವಾಗಿಯೇ ಗೂಂಡಾ ವರ್ತನೆ ತೋರಿರುವ ಕರ್ಣಿ ಸೇನಾ ನಾಯಕರ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಸರ್ಕಾರವನ್ನು ಆಗ್ರಹಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...