alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್ ಚಿತ್ರದ ಶೀರ್ಷಿಕೆ ವಿರುದ್ದ ದಾಖಲಾಯ್ತು ಮತ್ತೊಂದು ದೂರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯರ್’ ಚಿತ್ರಕ್ಕೆ ಮತ್ತೆ ವಿಘ್ನ ಉಂಟಾಗಿದೆ. ವಿಜಯಪುರದ ಕರ್ನಾಟಕ ಯುವಘರ್ಜನೆ ಸಂಘಟನೆ ಚಿತ್ರದ ಹೆಸರನ್ನು ಬದಲಿಸುವಂತೆ ಆಗ್ರಹಿಸಿದೆ. ಒಂದು ವೇಳೆ ಹೆಸರು ಬದಲಿಸದಿದ್ದಲ್ಲಿ ಮೈಸೂರು ಅರಸರ ಕುರಿತು ಚಿತ್ರ ತೆಗೆಯಲಿ ಎಂದು ಒತ್ತಾಯಿಸಿದೆ.

ಒಡೆಯರ್ ಎಂದಾಕ್ಷಣ ಮೈಸೂರು ಅರಸರು ಎಂಬ ಗೌರವ ಬರುತ್ತದೆ. ಆ ಹೆಸರಿಗೆ ನೂರಾರು ವರ್ಷಗಳ ಇತಿಹಾಸವಿದೆ. ರಾಜ್ಯದ ಜನತೆ ಮೈಸೂರು ಅರಸರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಹೀಗಿದ್ದಾಗ ಒಂದು ಕಮರ್ಷಿಯಲ್ ಚಿತ್ರಕ್ಕೆ, ಹಾಸ್ಯ ಅಥವಾ ರೌಡಿಸಂ ಚಿತ್ರಕ್ಕೆ ಒಡೆಯರ್ ಹೆಸರು ಬಳಸುವುದು ಸರಿಯಲ್ಲ. ಇದರಿಂದ ಜನರ ಭಾವನೆಗೆ ಧಕ್ಕೆ ಉಂಟಾಗುತ್ತೆ. ಎಂದು ಸಂಘಟನೆ ಒತ್ತಾಯಿಸಿದ್ದು, ಈ ಕುರಿತು ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕರು ಮತ್ತು ಚಿತ್ರ ತಂಡದ ವಿರುದ್ಧ ದೂರು ದಾಖಲಿಸಿದೆ.

ಈ ನಡುವೆ ಚಿತ್ರಕ್ಕೆ ಒಡೆಯರ್ ಹೆಸರಿಡುವ ಕುರಿತು ಪ್ರತಿಕ್ರಿಯೆ ನೀಡಿದ್ದ ರಾಜಮಾತೆ ಪ್ರಮೋದಾ ದೇವಿ, ಸಿನಿಮಾಗೆ ಒಡೆಯರ್ ಹೆಸರಿಡಲು ಯಾವುದೇ ಅಕ್ಷೇಪವಿಲ್ಲ. ಆದರೆ ಮೈಸೂರು ರಾಜವಂಶಕ್ಕೆ ಸಂಬಂಧಪಟ್ಟ ಅಂಶಗಳು ಚಿತ್ರದಲ್ಲಿ ಇದ್ದರೆ ಆಕ್ಷೇಪವಿದೆ ಎಂದು ಹೇಳಿದ್ದರು.

ಒಟ್ಟಾರೆ ದರ್ಶನ್ ಅಭಿನಯದ ‘ಒಡೆಯರ್’ ಚಿತ್ರ ಸೆಟ್ಟೇರುವ ಮೊದಲೇ ಸಾಕಷ್ಟು ವಿಘ್ನಗಳನ್ನು ಎದುರಿಸುತ್ತಿದೆ. ಚಿತ್ರದ ಹೆಸರನ್ನು ಚಿತ್ರ ತಂಡ ಬದಲಿಸುವುದೇ ಕಾದು ನೋಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...