alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾ ಪ್ರೇಮಿಗಳಿಗೆ ಶಾಕ್ ನೀಡುತ್ತಾ ಸರ್ಕಾರದ ಈ ನಿರ್ಧಾರ

ಕನ್ನಡ ಸಿನಿಮಾ ಪ್ರದರ್ಶಕರ ಸಂಘ ಈಗ ಹೊಸದೊಂದು ಸಂಕಟವನ್ನು ಎದುರಿಸುತ್ತಿದೆ. ಪ್ರಸಕ್ತ ವರ್ಷದಿಂದಲೇ ಕರ್ನಾಟಕ ಸರ್ಕಾರ, ಚಿತ್ರ ಮಂದಿರಗಳ ವಾರ್ಷಿಕ ಪರವಾನಗಿ ಮೊತ್ತವನ್ನು ಶೇಕಡಾ 350 ರಷ್ಟು ಹೆಚ್ಚಿಸಲಾಗಿದೆ. ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳ ಮಾಲೀಕರಿಗೂ ಈ ನಿಯಮ ಅನ್ವಯವಾಗಲಿದೆ.

ಕಳೆದ ಎರಡು ದಶಕಗಳಿಂದ ಕರ್ನಾಟಕದ ಸಿನಿಮಾ ಮಂದಿರಗಳ ಮಾಲೀಕರು ತಮ್ಮ ವಾರ್ಷಿಕ ಪರವಾನಗಿ ಪಡೆಯೋದಕ್ಕಾಗಿ ಪ್ರತಿ ವರ್ಷ 100 ಸ್ಕ್ವೇರ್ ಮೀಟರ್ಗೆ 1000 ರೂಪಾಯಿ ಪಾವತಿ ಮಾಡುತ್ತಿದ್ದರು. ಈ ವರ್ಷದಿಂದ ಪ್ರತಿ 100 ಸ್ಕ್ವೇರ್ ಮೀಟರ್ ಗೆ 4500 ರೂಪಾಯಿ ಪಾವತಿ ಮಾಡಬೇಕಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಚಿತ್ರದ ಟಿಕೆಟ್ ಬೆಲೆಯಲ್ಲೂ ಏರಿಕೆ ಕಾಣುವ ಸಾಧ್ಯತೆ ಇದೆ.

ಆಗಸ್ಟ್ 30ರಂದು ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಸೂಚನೆಯ ಪ್ರಕಾರ 50 ಸ್ಕ್ವೇರ್ ಮೀಟರ್ ನಂತರದ ಪ್ರದೇಶಕ್ಕೆ ಹೆಚ್ಚುವರಿಯಾಗಿ 2500 ರೂಪಾಯಿಗಳನ್ನು ಪಾವತಿ ಮಾಡಬೇಕಿದೆ. ಮೊದಲು ಇದರ ಮೊತ್ತ 500 ರೂಪಾಯಿಗಳಿಗೆ ನಿಗದಿಯಾಗಿತ್ತು.

ಈ ನಿಯಮದ ವಿರುದ್ಧ ಈಗ ಚಿತ್ರ ಪ್ರದರ್ಶಕರು ಅಸಮಾಧಾನಗೊಂಡಿದ್ದಾರೆ. 5000 ಸ್ಕ್ವೇರ್ ಮೀಟರ್ ಸಿನಿಮಾ ಮಂದಿರ ಇರುವ ಮಾಲೀಕರು ಮೊದಲು ತಮ್ಮ ಪರವಾನಗಿಗಾಗಿ ಪ್ರತಿ ಸ್ಕ್ವೇರ್ ಮೀಟರ್ ಗೆ 3000 ರೂಪಾಯಿ ಪಾವತಿಸುವ ಜಾಗದಲ್ಲಿ ಈಗ ಹೆಚ್ಚುವರಿಯಾಗಿ 20 ಸಾವಿರ ರೂಪಾಯಿ ಪಾವತಿಸಬೇಕಾಗುತ್ತೆ ಎಂದಿದ್ದಾರೆ.

ಹೊಸ ಕಾನೂನು ಚಿತ್ರ ಪ್ರದರ್ಶಕರಿಗೆ ಮರಣ ಶಾಸನವಾಗಿದೆ ಅಂತಾರೆ ಚಿತ್ರ ಪ್ರದರ್ಶಕರು. ಇದೆಲ್ಲದರ ಹೊರೆಯನ್ನ ಟಿಕೆಟ್ ಮೇಲೆ ಹೇರದೆ ಬೇರೆ ವಿಧಿ ಇಲ್ಲ ಅನ್ನೋದೇ ಅವರ ಅಭಿಪ್ರಾಯವಾಗಿದೆ. ಜಿಎಸ್ಟಿ ಜಾರಿಗೆ ತಂದ ಚಿತ್ರ ಪ್ರದರ್ಶನದ ಟಿಕೆಟ್ ಬೆಲೆಯೂ ಈಗ ಇಳಿಮುಖವಾಗಿದೆ. ಹಾಗಾಗಿ ಪ್ರದರ್ಶನಕರಿಗೆ ಮತ್ತು ಚಿತ್ರಮಂದಿರಗಳ ಮಾಲೀಕರಿಗೆ ಇದರಿಂದ ಹೆಚ್ಚಿನ ತೊಂದರೆ ಆಗಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...