alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣಾ ಪ್ರಚಾರಕ್ಕೆ ರೆಡಿಯಾಗ್ತಿದೆ ಭಟ್ಟರ ಸಾಂಗ್

ವಿಭಿನ್ನ ಶೈಲಿಯ ಹಾಡಿನ ಸಾಹಿತ್ಯದ ಮೂಲಕ ಮನೆ ಮಾತಾಗಿರುವ ನಿರ್ದೇಶಕ ಯೋಗರಾಜ್ ಭಟ್ ಅವರು ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ವಿಶೇಷ ಹಾಡೊಂದನ್ನು ರಚಿಸಲಿದ್ದಾರೆ. ವಿಕಟಕವಿ ಯೋಗರಾಜ್ ಭಟ್ ಅವರ ಸಾಹಿತ್ಯ ಯುವಕರಿಗೆ ಅಚ್ಚುಮೆಚ್ಚು

ಚುನಾವಣಾ ಆಯೋಗ ಮತದಾನದ ಅರಿವು ಮೂಡಿಸಲು ಹಾಗೂ ಮತದಾನದ ಪ್ರಮಾಣವನ್ನು ಹೆಚ್ಚಿಸಲು ವಿಶೇಷ ಹಾಡೊಂದನ್ನು ಸಿದ್ಧಪಡಿಸಿಕೊಡುವಂತೆ ಯೋಗರಾಜ್ ಭಟ್ ಅವರಿಗೆ ಹೇಳಿದ್ದು, ಭಟ್ಟರು ಇದಕ್ಕಾಗಿ ಸಿದ್ಧತೆ ನಡೆಸಿದ್ದಾರೆ.

ವಿ. ಹರಿಕೃಷ್ಣ ಹಾಡಿಗೆ ಸಂಗೀತ ನೀಡಲಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಲಿರುವ ಈ ವಿಶೇಷ ಸಾಂಗ್ ಅನ್ನು ರಾಜ್ಯದ ವಿವಿಧೆಡೆ ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆ.

ಹಿಂದೆ ಚುನಾವಣೆ ವೇಳೆ ಭಟ್ಟರು ರಚಿಸಿದ್ದ ಹಾಡೊಂದು ಭಾರೀ ಸಂಚಲನ ಮೂಡಿಸಿತ್ತು. ಈ ಬಾರಿ ಅವರು ರಚಿಸಲಿರುವ ಹಾಡು ಕೂಡ ಗಮನ ಸೆಳೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...