alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರನೇ ಬಾರಿ ಅಪ್ಪನಾಗ್ತಿದ್ದಾನೆ ಈ ನಟಿಯ ಮಾಜಿ ಪತಿ

ಬಾಲಿವುಡ್ ಬೆಡಗಿ ಕರಿಷ್ಮಾ ಕಪೂರ್ ಅಜ್ಜಿ ಕೃಷ್ಣರಾಜ್ ಕಪೂರ್ ರನ್ನು ಕಳೆದುಕೊಂಡ ದುಃಖದಲ್ಲಿದ್ದಾಳೆ. ಕೃಷ್ಣರಾಜ್ ಕಪೂರ್ ಇಹಲೋಕ ತ್ಯಜಿಸಿ ಎರಡು ದಿನ ಕಳೆದಿದೆ. ಈ ಮಧ್ಯೆ ಕರಿಷ್ಮಾ ಕಪೂರ್ ಮಾಜಿ ಪತಿ ಕಡೆಯಿಂದ ಖುಷಿ ಸುದ್ದಿಯೊಂದು ಬಂದಿದೆ. ಕರಿಷ್ಮಾ ಕಪೂರ್ ಮಾಜಿ ಪತಿ ಮೂರನೇ ಬಾರಿ ತಂದೆಯಾಗ್ತಿದ್ದಾನೆ.

ಕರಿಷ್ಮಾ ಕಪೂರ್ 2003ರಲ್ಲಿ ಸಂಜಯ್ ಕಪೂರ್ ಕೈ ಹಿಡಿದಿದ್ದಳು. 2016ರಲ್ಲಿ ಇಬ್ಬರ ವಿಚ್ಛೇದನವಾಗಿತ್ತು. ನಂತ್ರ ಸಂಜಯ್ ಕಪೂರ್ ಮಾಡೆಲ್ ಹಾಗೂ ನಟಿ ಪ್ರಿಯಾ ಕೈ ಹಿಡಿದಿದ್ದ. ಈಗ ಪ್ರಿಯಾ 7 ತಿಂಗಳ ಗರ್ಭಿಣಿ ಎಂಬ ಸುದ್ದಿ ಬಂದಿದೆ. ಡಿಸೆಂಬರ್ ನಲ್ಲಿ ಸಂಜಯ್ ಮನೆಗೆ ಮಗು ಬರಲಿದೆ. ಕೆಲ ದಿನಗಳ ಹಿಂದಷ್ಟೇ ಮದುವೆ ವಾರ್ಷಿಕೋತ್ಸವದ ಫೋಟೋಗಳನ್ನು ಸಂಜಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.

ಸಂಜಯ್ ಕಪೂರ್ 52ನೇ ವಯಸ್ಸಿನಲ್ಲಿ ಮೂರನೇ ಬಾರಿ ತಂದೆಯಾಗ್ತಿದ್ದಾರೆ. ಕರಿಷ್ಮಾ-ಸಂಜಯ್ ದಂಪತಿಗೆ ಇಬ್ಬರು ಮಕ್ಕಳು. ಇಬ್ಬರೂ ಕರಿಷ್ಮಾ ಜೊತೆಗಿದ್ದಾರೆ. ಈಗ ಪ್ರಿಯಾ ಮಗುವಿಗೆ ಸಂಜಯ್ ತಂದೆಯಾಗ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...