alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿಗಾಗಿ ಈಗಲೇ ಸೈಫೀನಾ ಶಾಪಿಂಗ್ ….

SAIF KAREENA SHOPPINGನಟಿ ಕರೀನಾ ಕಪೂರ್ ತಾಯಿಯಾಗ್ತಿರೋ ವಿಚಾರ ಸಿನಿ ಜಗತ್ತಿನಲ್ಲಿ ಭಾರೀ ಸುದ್ದಿಯಾಗಿತ್ತು. ಡಿಸೆಂಬರ್ ನಲ್ಲಿ ಕರೀನಾ ಹಾಗೂ ಸೈಫ್ ಅಲಿ ಖಾನ್ ದಂಪತಿಯ ಚೊಚ್ಚಲ ಕೂಸು ಭುವಿಗೆ ಬರಲಿದೆ.

ಸದ್ಯ ವೀರೆ ದೆ ವೆಡ್ಡಿಂಗ್ ಸಿನಿಮಾದ ಶೂಟಿಂಗ್ ನಲ್ಲಿ ಕರೀನಾ ಬ್ಯುಸಿಯಾಗಿದ್ದಾರೆ. ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಕರೀನಾ ಮೆಟರ್ನಿಟಿ ಬ್ರೇಕ್ ತೆಗೆದುಕೊಳ್ತಿದ್ದಾರೆ. ಕರುಳ ಕುಡಿಯನ್ನು ಸ್ವಾಗತಿಸಲು ಕರೀನಾ ಹಾಗೂ ಸೈಫ್ ಭರ್ಜರಿ ಸಿದ್ಧತೆ ಕೂಡ ಮಾಡಿಕೊಳ್ತಿದ್ದಾರೆ. ಮಗುವಿಗಾಗಿ ನರ್ಸರಿ ಒಂದನ್ನು ರೆಡಿ ಮಾಡ್ತಿದ್ದಾರೆ. ಅಲ್ಲಿ ತೊಟ್ಟಿಲು, ಬಗೆಬಗೆಯ ಆಟಿಕೆಗಳನ್ನಿಟ್ಟು ಅಲಂಕರಿಸುತ್ತಿದ್ದಾರೆ. ನರ್ಸರಿಯನ್ನು ಡಿಸೈನ್ ಮಾಡಲೆಂದೇ ಅಂತರಾಷ್ಟ್ರೀಯ ಡಿಸೈನರ್ ಒಬ್ಬರನ್ನು ಕರೆಸಿದ್ದಾರೆ.

ಅಷ್ಟೇ ಅಲ್ಲ ಇತ್ತೀಚೆಗಷ್ಟೆ ಲಂಡನ್ ನ ದುಬಾರಿ ಮಳಿಗೆಯೊಂದರಲ್ಲಿ ಬಗೆ ಬಗೆಯ ಆಟಿಕೆಗಳನ್ನು ಖರೀದಿಸಿದ್ದಾರೆ. ಕೂಸು ಹುಟ್ಟುವ ಮುನ್ನವೇ ಕರೀನಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಟಿಕೆಗಳನ್ನು ತಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...