alex Certify
ಕನ್ನಡ ದುನಿಯಾ       Mobile App
       

Kannada Duniya

‘ಲಿಪ್ ಲಾಕ್’ ಮಾತು ಮರೆತ ಕರೀನಾ ಮಾಡಿದ್ದೇನು?

ki-and-ka-3

ಬಾಲಿವುಡ್ ನಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾಗಲೇ ಮದುವೆಯಾದ ನಟಿ ಕರೀನಾ ಕಪೂರ್, ಸೈಫ್ ಆಲಿ ಖಾನ್ ಜೊತೆಗೆ ವೈವಾಹಿಕ ಬದುಕಿಗೆ ಕಾಲಿಟ್ಟರು. ಮದುವೆಯಾದರೂ ಸಿನಿಮಾ ರಂಗದಲ್ಲಿ ಕರೀನಾ ಸಕ್ರಿಯವಾಗಿದ್ದಾರೆ. ಸೈಫ್ ಕೂಡ ಬ್ಯುಸಿಯಾಗಿದ್ದಾರೆ. ಈಗ ಹೇಳಹೊರಟಿರುವ ವಿಷಯ ಅದಲ್ಲ,

ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ಮದುವೆಯಾದ ಸಂದರ್ಭದಲ್ಲಿ ಇಬ್ಬರೂ ಸಿನಿಮಾಗಳಲ್ಲಿ ನಟಿಸುವಾಗ ‘ಲಿಪ್ ಲಾಕ್’ ಸೀನ್ ಗಳಲ್ಲಿ ಕಾಣಿಸಿಕೊಳ್ಳಬಾರದೆಂದು ಒಪ್ಪಂದ ಮಾಡಿಕೊಂಡಿದ್ದರಂತೆ. ಆದರೆ, ಈ ಒಪ್ಪಂದವನ್ನು ಕರೀನಾ ಮರೆತು ಬಿಟ್ಟಿದ್ದಾರೆ. ತಮಗಿಂತ 5 ವರ್ಷ ಕಡಿಮೆ ವಯಸ್ಸಿನ ಅರ್ಜುನ್ ಕಪೂರ್ ಜೊತೆಗೆ ಮೈ ಚಳಿ ಬಿಟ್ಟು ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರ್. ಬಾಲ್ಕಿ ನಿರ್ದೇಶನದ ‘ಕಿ & ಕ’ ಸಿನೆಮಾದಲ್ಲಿ ಕರೀನಾ ಅರ್ಜುನ್ ತುಟಿಗೆ ಚುಂಬಿಸಿದ್ದಾರೆ.

ಈ ಚಿತ್ರದಲ್ಲಿ ಕರೀನಾ ಮಹಿಳಾ ಉದ್ಯಮಿಯ ಪಾತ್ರ ನಿರ್ವಹಿಸಿದ್ದು, ಅರ್ಜುನ್ ಮನೆಗೆಲಸದ ಗಂಡನಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ರಿಲೀಸ್ ಆಗಿದ್ದು, ಅದರಲ್ಲಿ ಅಮ್ಮಾವ್ರ ಗಂಡನಾಗಿ ಅರ್ಜುನ್ ಕಪೂರ್, ಹಾಟ್ ಬ್ಯೂಟಿ ಕರೀನಾ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ‘ಲಿಪ್ ಲಾಕ್’ ವಿಷಯ ‘ಟಾಕ್ ಆಫ್ ದ ಟೌನ್’ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...