alex Certify
ಕನ್ನಡ ದುನಿಯಾ       Mobile App
       

Kannada Duniya

ಕಂದನ ಜೊತೆ ಮನೆಗೆ ಬಂದ ಕರೀನಾ

kareena_640x480_41482405685

ಬಿಟೌನ್ ನ ಹೊಸ ಅಮ್ಮ ಕರೀನಾ ಕಪೂರ್ ಖಾನ್ ಗೆ ಡಿಸೆಂಬರ್ 20 ರಂದು ಗಂಡು ಮಗು ಜನಿಸಿತ್ತು. ಇವತ್ತು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬೇಬೋ ಡಿಸ್ಚಾರ್ಜ್ ಆಗಿದ್ದಾಳೆ. ಕರೀನಾ ತಮ್ಮ ಮಗ ತೈಮುರ್, ಪತಿ ಸೈಫ್ ಅಲಿ ಖಾನ್ ಜೊತೆಗೆ ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ರು.

ಮನೆಯೊಳಗೆ ಪ್ರವೇಶಿಸುವ ಮುನ್ನ ಸೈಫೀನಾ ದಂಪತಿ ಮಗುವಿನ ಜೊತೆಗೆ ಅಭಿಮಾನಿಗಳತ್ತ ಕೈಬೀಸಿದ್ರು. ಫೋಟೋಗ್ರಾಫರ್ ಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡದೆ ಕ್ಯಾಮರಾಗೆ ಪೋಸ್ ಕೊಟ್ರು.

ಇವತ್ತು ಬೆಳಗ್ಗೆಯಷ್ಟೆ ಗಂಡುಮಗು ಜನಿಸಿರುವ ಸುದ್ದಿಯನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಸೈಫ್-ಕರೀನಾ ಅಭಿಮಾನಿಗಳು ಹಾಗೂ ಮಾಧ್ಯಮದವರಿಗೆ ಧನ್ಯವಾದ ಹೇಳಿದ್ದಾರೆ. ಮನೆಯಲ್ಲಿ ಕರೀನಾ ಮಗುವಿಗಾಗಿ ವಿಶೇಷ ನರ್ಸರಿಯೊಂದನ್ನು ರೆಡಿ ಮಾಡಲಾಗಿದೆ. 2008 ರಲ್ಲಿ ತಶನ್ ಚಿತ್ರದ ಶೂಟಿಂಗ್ ವೇಳೆ ಕರೀನಾ ಹಾಗೂ ಸೈಫ್ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ರು. 4 ವರ್ಷ ಡೇಟಿಂಗ್ ನಡೆಸಿದ ಈ ಜೋಡಿ 2012 ರಲ್ಲಿ ಮದುವೆಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...