alex Certify
ಕನ್ನಡ ದುನಿಯಾ       Mobile App
       

Kannada Duniya

ಕರೀನಾ….ಈ ರೀತಿ ಹೃದಯ ಬಡಿತ ಹೆಚ್ಚಿಸೋದು ಸರೀನಾ…?

ಬಾಲಿವುಡ್‌ನ ಮಾದಕ ತಾರೆ ಕರೀನಾ ಕಪೂರ್‌ ಸೌಂದರ್ಯಕ್ಕೆ ಮರುಳಾಗದವರಿಲ್ಲ. ಅವರೊಬ್ಬ ಎವರ್‌ ಗ್ರೀನ್ ಚೆಲುವೆ ಎಂಬುದನ್ನು ಸಾಬೀತುಪಡಿಸುವಂತಿದೆ ಇತ್ತೀಚಿನ ಅವರ ಫೋಟೋ ಶೂಟ್.

ಅವರೀಗ ಮದುವೆಯಾಗಿ ಮಗು ಹೆತ್ತ ತಾಯಿ ಎಂಬುದನ್ನೂ ಮರೆಯುವಂತೆ ಮಾಡುತ್ತದೆ ಆ ಮೈಮಾಟ. ಪ್ರಸಿದ್ಧ ಫ್ಯಾಶನ್ ನಿಯತಕಾಲಿಕೆ ವೋಗ್ ಇಂಡಿಯಾದ ನವೆಂಬರ್ ಸಂಚಿಕೆಗಾಗಿ ಕರೀನಾ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಕೆಂಪು ದಿರಿಸಿನಲ್ಲಂತೂ ಕರೀನಾ ಹಾಟ್ ಹಾಟ್ ಆಗಿ ಕಾಣಿಸುತ್ತಾರೆ. ಆಕೆ ಧರಿಸಿದ ಕಪ್ಪು ಬ್ಲೌಸ್ ಹಾಗೂ ಕೆಂಪು ಟ್ರೌಸರ್ ಸದ್ಯದಲ್ಲೇ ಫ್ಯಾಶನ್ ಟ್ರೆಂಡ್ ಆಗುವುದಂತೂ ಖಾತರಿ.

ಕೆಂಪು ಹಾಗೂ ಹಸಿರು ಬಟ್ಟೆಗಳಲ್ಲಿ ಮಿಂಚಿದ ಕರೀನಾ ಕಪೂರ್ ಖಾನ್ ಮತ್ತೊಮ್ಮೆ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಕರೀನಾರ ಹೊಸ ಮಾದಕ ನೋಟವನ್ನು ನೀವೂ ಕಣ್ತುಂಬಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...