alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮ ಕರೀನಾಗಿಂತ ದುಬಾರಿ ಬೆಲೆಯ ಬಟ್ಟೆ ಹಾಕ್ತಾನೆ ತೈಮೂರ್

kareenakapoorkhan-son-taimuralikhan-cutest-pic

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಗಿಂತ ಕರೀನಾ ಕಪೂರ್ ಮಗ ಸುದ್ದಿಯಲ್ಲಿದ್ದಾನೆ. ಚಿತ್ರಕ್ಕಾಗಿ ಫಿಟ್ನೆಸ್ ಮೆಂಟೇನ್ ಮಾಡ್ತಿರುವ ಕರೀನಾ ಮಗನಿಗಾಗಿ ಸಾಕಷ್ಟು ಟೈಂ ಮೀಸಲಿಟ್ಟಿದ್ದಾಳೆ. ಮಗನ ಪ್ರತಿಯೊಂದು ವಿಷಯದ ಬಗ್ಗೆಯೂ ಹೆಚ್ಚಿನ ಗಮನ ನೀಡ್ತಿದ್ದಾಳೆ. ಹಾಗಾಗಿಯೇ ಕರೀನಾ ಮಗ ತೈಮೂರ್ ಈಗ್ಲೇ ಸೆಲೆಬ್ರಿಟಿಯಾಗಿದ್ದಾನೆಂದ್ರೆ ತಪ್ಪಾಗಲಾರದು.

ಆರು ತಿಂಗಳ ತೈಮೂರ್ ಫೋಟೋ ಆಗಾಗ ವೈರಲ್ ಆಗ್ತಿರುತ್ತದೆ. ತೈಮೂರ್ ಪ್ರತಿಯೊಂದು ಫೋಟೋದಲ್ಲೂ ಬೇರೆ ಬೇರೆ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾನೆ. ತೈಮೂರ್ ಬಟ್ಟೆ, ಶೂ ಹಾಗೂ ಡೈಪರ್ ಆಯ್ಕೆಯಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಕರೀನಾ. ಒಳ್ಳೆ ಬ್ರ್ಯಾಂಡ್ ನ ಬಟ್ಟೆಯನ್ನೇ ಮಗನಿಗೆ ಹಾಕ್ತಾಳೆ.

ಕರೀನಾ ತೈಮೂರ್ ಗೆ ಹಾಕುವ ಒಂದು ಟೀ ಶರ್ಟ್ ಬೆಲೆ ಬರೋಬ್ಬರಿ 5 ಸಾವಿರ ರೂಪಾಯಿ. ಇನ್ನು ಶೂ ಹಾಗೂ ಡೈಪರ್ ಬೆಲೆ 10 ಸಾವಿರ ರೂಪಾಯಿಯಂತೆ. ಕರೀನಾ ಹಾಗೆ ತೈಮೂರ್ ಗೂ ಅನೇಕ ಬ್ರ್ಯಾಂಡ್ ಗಳ ಶೂಗಳನ್ನು ಖರೀದಿ ಮಾಡಲಾಗಿದೆ.  ತೈಮೂರ್ ಬಳಿ ಇರುವ ಫ್ರೆಂಚ್ ಬ್ರ್ಯಾಂಡ್ ಶೂ ಒಂದರ ಬೆಲೆ 13 ಸಾವಿರ ರೂ ಎಂದು ಮೂಲಗಳು ಹೇಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...